ಮಹಿಳೆಯೊಬ್ಬರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಶಾಶಕರು ತಮ್ಮ ಕೆಲಸವೇ ದೊಡ್ಡದೆಂದೂ ಮುಂದೆ ನಡೆದಿದ್ದಾರೆ.
ಕೊಪ್ಪಳ[ಏ. 20] ಈ ಕರ್ನಾಟಕದ ಬಿಜೆಪಿ ಶಾಸಕರು ಮಾನವೀಯತೆ ಮರೆತರೆ? ಹೀಗೊಂದು ಪ್ರಶ್ನೆಯನ್ನು ಕೇಳಿಕೊಳ್ಳುವಂತಹ ಪ್ರಕರಣ ನಡೆದು ಹೋಗಿದೆ.
ಅಪಘಾತವಾದ ಮಹಿಳೆಯನ್ನು ರಸ್ತೆಯಲ್ಲೆ ಬಿಟ್ಟು ಶಾಸಕರು ಪ್ರಚಾರಕ್ಕೆ ತೆರಳಿದ್ದಾರೆ. ಗಂಗಾವತಿ ತಾಲೂಕಿನ ಗುಂಡೂರು ಕ್ರಾಸ್ ಬಳೀ ಬೈಕ್ ಟೈರ್ ಬ್ಲಾಸ್ಟ್ ಆಗಿ ಮಹಿಳೆಯೊಬ್ಬರು ಅಪಘಾತಕ್ಕೆ ಗುರಿಯಾಗಿದ್ದರು.
ಲೋಕ ಸಮರಕ್ಕೂ ಮುನ್ನವೇ ಬೆಳಗಾವಿಯಲ್ಲಿ ರಾಜಕಾರಣದ ದಂಗಲ್
ಜಾಲಿಹಾಳ ಕ್ಯಾಂಪ್ ನಿಂದ ಶ್ರೀರಾಮನಗರಕ್ಕೆ ಮಹಿಳೆ ತೆರಳುತ್ತಿದ್ದರು. ಘಟನೆ ವೇಳೆ ಸ್ಥಳದಲ್ಲಿದ್ದ ಕನಕಗಿರಿ ಶಾಸಕ ಬಿಜೆಪಿ ಶಾಸಕ ಬಸವರಾಜ ದಡೆಸೂಗೂರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡದೆ ಪ್ರಚಾರಕ್ಕೆ ತೆರಳಿದ್ದಾರೆ.