ಇಬ್ಬರು ಪೇದೆಗಳಿಗೆ ಗಲ್ಲು ಶಿಕ್ಷೆ

By Web DeskFirst Published Jul 26, 2018, 11:17 AM IST
Highlights

ಲಾಕಪ್‌ಡೆತ್ ಪ್ರಕರಣವೊಂದರ ಸಂಬಂಧ ಪೊಲೀಸ್ ಪೇದೆಗಳಿಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಗಲ್ಲು ಶಿಕ್ಷೆ ವಿಧಿಸಿದೆ

ತಿರುವನಂತಪುರ: ಹದಿಮೂರು ವರ್ಷಗಳ ಹಿಂದೆ ಕೇರಳದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಲಾಕಪ್‌ಡೆತ್ ಪ್ರಕರಣವೊಂದರ ಸಂಬಂಧ ಪೊಲೀಸ್ ಪೇದೆಗಳಿಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಗಲ್ಲು ಶಿಕ್ಷೆ ವಿಧಿಸಿದೆ. ತನ್ಮೂಲಕ ಅಮಾಯಕನಿಗೆ  ಚಿತ್ರ ಹಿಂಸೆ ನೀಡಿ ಕೊಂದಿದ್ದ ಪೊಲೀಸರಿಗೆ ತಕ್ಕ ಶಾಸ್ತಿ ಮಾಡಿದೆ. ಕೆ. ಜೀತುಕುಮಾರ್ ಹಾಗೂ ಎಸ್.ವಿ. ಶ್ರೀಕುಮಾರ್ ಎಂಬುವರೇ ಶಿಕ್ಷೆಗೆ ಒಳ 
ಗಾದವರು. ಶಿಕ್ಷೆಯ ಜತೆಗೆ 2 ಲಕ್ಷ ರು. ದಂಡ ವನ್ನೂ ನ್ಯಾಯಾಲಯ ವಿಧಿಸಿದೆ. 

ಇವರಲ್ಲದೆ  ಸಬ್ ಇನ್ಸ್‌ಪೆಕ್ಟರ್ ಅಜಿತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಇ.ಕೆ. ಸಾಬು ಹಾಗೂ ಸಹಾಯಕ ಆಯುಕ್ತ ಕೆ. ಹರಿದಾಸ್ ಅವರಿಗೆ ತಲಾ ೩ ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2005 ರ ಸೆ. 27 ರಂದು ತಿರುವನಂತಪುರದ ಫೋರ್ಟ್ ಪೊಲೀಸರು ಪಾರ್ಕ್‌ವೊಂದರಲ್ಲಿ ಕುಳಿತಿದ್ದ ಉದಯ್ ಕುಮಾರ್ ಹಾಗೂ ಸ್ನೇಹಿತ ಸುರೇಶ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದರು. ಸುರೇಶ್ ಕಳ್ಳತನದಲ್ಲಿ ತೊಡಗಿದ್ದ. ಆತ ಕದ್ದ ಹಣ ಉದಯ್‌ಕುಮಾರ್ ಬಳಿ ಸಿಕ್ಕಿತ್ತು. 

ಇಬ್ಬರನ್ನೂ ಠಾಣೆಗೆ ತಂದು ಚಿತ್ರ ಹಿಂಸೆ ನೀಡಿದ್ದರು. ಮರದ ದಿಮ್ಮಿ ಹತ್ತಿಸಿದ್ದರಿಂದ ಉದಯ್ ಕುಮಾರ್ ಲಾಕಪ್‌ನಲ್ಲೇ ಸಾವನ್ನಪ್ಪಿದ್ದರು.

click me!