ಒಂದು ಹೆಜ್ಜೆ ಇಡುತ್ತಲೇ ಭೂಮಿಯಲ್ಲಿ ಹುದುಗಿ ಹೋದ, ಭಯಾನಕ ದೃಶ್ಯ ಸೆರೆ!

Published : Oct 26, 2019, 01:39 PM ISTUpdated : Oct 26, 2019, 05:11 PM IST
ಒಂದು ಹೆಜ್ಜೆ ಇಡುತ್ತಲೇ ಭೂಮಿಯಲ್ಲಿ ಹುದುಗಿ ಹೋದ, ಭಯಾನಕ ದೃಶ್ಯ ಸೆರೆ!

ಸಾರಾಂಶ

ನೋಡ ನೋಡುತ್ತಿದ್ದಂತೆಯೇ ಕುಸಿದು ಬಿತ್ತು ರಸ್ತೆ| ಒಂದು ಹೆಜ್ಜೆ ಇಟ್ಟಾತ ಭೂಮಿಯೊಳಗೆ ಹುದುಗಿ ಹೋದ| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್[ಅ.26]: ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಚೆನ್ನಾಗಿದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಮುಂದಿನ ಹೆಜ್ಜೆ ಇಡುತ್ತಿದ್ದಂತೆಯೇ ಭೂಮಿಯೊಳಗೆ ಹುದುಗಿ ಹೋದ ವಿಡಿಯೋ ಇದಾಗಿದ್ದು, ಸದ್ಯ ಪಾದಾಚಾರಿಗಳಲ್ಲಿ ಇದು ನಡುಕ ಹುಟ್ಟಿಸಿದೆ.

ಆರಂಭದಲ್ಲಿ ಪ್ರಬಲ ಭೂಕಂಪದಿಂದಾಗಿ ಬಿರುಕು ಉಂಟಾಗಿದೆ. ಹೀಗಾಗಿ ಪಾದಾಚಾರಿ ಬಿದ್ದಿದ್ದಾನೆಂಬ ಅನಿಸಿಕೆ ವ್ಯಕ್ತವಾಗಿತ್ತು. ಆದರೆ ಇದಾದ ಬಳಿಕ ನಡೆದ ತನಿಖೆಯಲ್ಲಿ ಈ ರಸ್ತೆ ಚರಂಡಿಯೊಂದರ ಮೇಲೆ ನಿರ್ಮಾಣವಾಗಿದೆ ಎಂಬ ಮಾಹಿತಿ ಬಯಲಾಗಿದೆ. ಹೀಗಾಗಿ ಈ ರಸ್ತೆ ನೋಡ ನೋಡುತ್ತಿದ್ದಂತೆಯೇ ಬಿರುಕು ಬಿಟ್ಟಿದೆ ಎಂಬ ರಹಸ್ಯ ಬಯಲಾಗಿದೆ. ಸದ್ಯ ಘಟನೆಯಲ್ಲಿ ಗಾಯಾಳುವಾದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಏನಾಗುತ್ತಿದೆ ಎಂದು ಅವರಿಗೂ ತಿಳಿಯದಾಗಿದೆ. ಆದರೆ ಎಚ್ಚೆತ್ತುಕೊಂಡ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಭೂಮಿಯಲ್ಲಿ ಹುದುಗಿ ಹೋದವರನ್ನು ಎತ್ತಿ, ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. 

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ