ಕರಾವಳಿಯಲ್ಲಿ ಕುಂಭದ್ರೋಣ : 3 ಸಾವು, ಶಾಲೆಗಳಿಗೆ ರಜೆ

First Published Jul 7, 2018, 8:39 PM IST
Highlights
  • ಪುತ್ತೂರಿನ ಹೆಬ್ಬಾರ್ ಬೈಲ್'ನಲ್ಲಿ ಕಾಂಪೌಂಡ್ ಕುಸಿದು ಅಜ್ಜಿ, ಮೊಮ್ಮಗ ಸಾವು
  • ಶೃಂಗೇರಿಯ ಕೃಷಿ ಹೊಂಡದಲ್ಲಿ  ಬಿದ್ದು ರೈತ ಸುರೇಂದ್ರ (45) ಸಾವು

ಉಡುಪಿ/ಮಂಗಳೂರು[ಜು.07]: ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಹೆಬ್ಬಾರ್ ಬೈಲ್ ಎಂಬಲ್ಲಿ ಗುಡ್ಡದ ಬದಿಯಲ್ಲಿದ್ದ ಮನೆಗೆ ಗುಡ್ಡ, ಕಾಂಪೌಂಡ್ ಕುಸಿದು ಮನೆಯಲ್ಲಿ ‌ಮಲಗಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಾರ್ವತಿ[65], ಧನುಷ್[11]  ಎಂದು ಗುರುತಿಸಲಾಗಿದೆ.

ಪುತ್ತೂರು ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ‌ ನದಿಗಳು ತುಂಬಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 

ಶೃಂಗೇರಿಯಲ್ಲಿ ರೈತ ಸಾವು
ಚಿಕ್ಕಮಗಳೂರಿನ ಶೃಂಗೇರಿ ಠಾಣಾ ವ್ಯಾಪ್ತಿಯ ಗೋಣಿ ಬೈಲು ಎಂಬಲ್ಲಿ  ನೀರು ತುಂಬಿದ ಕೃಷಿ ಹೊಂಡದಲ್ಲಿ  ಬಿದ್ದು ರೈತ ಸುರೇಂದ್ರ (45) ಮೃತಪಟ್ಟಿದ್ದಾರೆ.

ಕೊಡಗಿನಲ್ಲಿ ಸೇತುವೆ ಕುಸಿತ
ಕೊಡಗು ಜಿಲ್ಲೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದ್ದು ಸಂಚಾರ ಸ್ಥಗಿತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

click me!