
ಕಲಬುರಗಿ(ಡಿ.21): ಬಟ್ಟೆ ತೊಳೆಯಲು ಹೋದ ಯುವತಿಯನ್ನು ಮೊಸಳೆ ಎಳೆದೊಯ್ದಿದೆ ಎಂಬ ವಿಚಾರ ಗೊತ್ತಾಗುತ್ತಿದಂತೆ ಇಡೀ ಊರೇ ಆ ನದಿ ದಡ ಮೇಲೆ ಜಮಾಯಿಸಿತ್ತು. ಅಗ್ನಿಶಾಮಕ ಸಿಬ್ಬಂದಿ, ಮುಳುಗ ತಜ್ಞರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದರು. ಆದರೆ ಕೆಲ ಗಂಟೆಗಳ ಬಳಿಕ ಗೊತ್ತಾಗಿದ್ದು, ಆಕೆಯನ್ನು ಮೊಸಳೆ ಹೊತ್ತೊಯ್ದಿಲ್ಲ ಬದಲಾಗಿ ಪ್ರಿಯಕರ ೆನ್ನುವುದು. ಏನಿದು ಫಿಲಂ ಶೈಲಿ ಸ್ಟೋರಿ ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಭೋಸಗಾ ಬಿ ಗ್ರಾಮಅಶ್ವಿನಿ ಎಂಬ ಇದೇ ಗ್ರಾಮದ ೧೮ ವರ್ಷದ ಯುವತಿ ಬಟ್ಟೆ ತೊಳೆಯಲು ನದಿಗೆ ಇಳಿದಾಗ ಮೊಸಳೆಯೊಂದು ಎಳೆದುಕೊಂಡು ಹೋಗಿದೆ ಎಂದು ಆಕೆಯ ಗೆಳತಿಯೇ ವಿಷಯ ತಿಳಿಸಿದಾಗ ಇಡೀ ಊರೇ ಬೆಚ್ಚಿಬಿತ್ತು. ಪೋಲೀಸ್, ಅಗ್ನಿ ಶಾಮಕ ದಳ, ಮೀನುಗಾರರು ನದಿಗಿಳಿದು ಮೊಸಳೆ ಪಾಲಾದ ಯುವತಿಯ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಮೂರು ಗಂಟೆ ಕಾರ್ಯಾಚರಣೆ ನಡೆಸಿದರೂ ಯುವತಿ ಸಿಗಲಿಲ್ಲ. ಅಷ್ಟರಲ್ಲಿಯೇ ಆಕೆಯ ಗೆಳತಿ ಚೆನ್ನಮ್ಮ ನೀಡಿದ ಮಾಹಿತಿ ಎಲ್ಲರನ್ನು ದಂಗು ಬಡಿಸಿತು.
"ಅಶ್ವಿನಿಯನ್ನು ಮೊಸಳೆ ಎಳೆದೊಯ್ದಿಲ್ಲ ಯಾರೊಂದಿಗೋ ಜೊತೆ ಓಡಿ ಹೋಗಿದ್ದಾಳೆ"
ಹೀಗಂತಾ ಅಶ್ವಿನಿ ಗೆಳತಿ ಚೆನ್ನಮ್ಮ ಹೇಳಿಕೆ ನೀಡುವ ಮೂಲಕ ಎಲ್ಲರನ್ನು ಒಂದು ಕ್ಷಣ ಅಚ್ಚರಿಗೊಳಿಸಿದಳು.ಇದೇ ವೇಳೆ ತನ್ನ ಸಂಬಂಧಿಕರೊಬ್ಬರ ಮೊಬೈಲ್'ಗೆ ಮೆಸೇಜ್ ಮಾಡಿ ಮೊಸಳೆ ನನಗೆ ಗಾಯಗೊಳಿಸಿದ್ದು, ನದಿಯ ದಡದಲ್ಲಿದ್ದೇನೆ. ಹುಡುಕಬೇಡಿ ಎಂದು ಅಶ್ವಿನಿ ಸಂದೇಶ ಕಳುಹಿಸಿದ್ದಾಳೆ.
ಇನ್ನೂ ಈ ಮೆಸೇಜ್'ನಿಂದ ಅಗ್ನಿಶಾಮಕ ಸಿಬ್ಬಂದಿ ಮುಳುಗುತಜ್ಞರು, ಶೋಧಕಾರ್ಯ ಕೈಬಿಟ್ಟು ವಾಪಸ್ ಹೋಗಿದ್ದಾರೆ. ಮುಂದಿನ ತಿಂಗಳು ಸೋದರ ಮಾವನ ಜೊತೆ ಅಶ್ವಿನಿಗೆ ಮದುವೆ ನಿಶ್ಚಯವಾಗಿತ್ತು. ಅಷ್ಟರಲ್ಲೇ ಅಶ್ವಿನಿ ಮೊಸಳೆ ಪ್ರಹಸನ ಮಾಡಿ ನಾಪತ್ತೆಯಾಗಿದ್ದಾಳೆ. ಆದರೆ ಎಲ್ಲಿದ್ದಾಳೆ? ಯಾರ ಜೊತೆ ಓಡಿಹೋಗಿದ್ದಾಳೆ ಎಂಬುದು ಇನ್ನು ಗೊತ್ತಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ನೆಲೋಗಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.