
ಬೆಂಗಳೂರು(ಜೂ.06): ಎಐಎಡಿಎಂಕೆ ಪಕ್ಷ ರಾಜನಿಲ್ಲದ ರಾಜ್ಯದಂತಾಗಿದೆ. ಅಮ್ಮ ಇಹಲೋಕ ತ್ಯಜಿಸಿದರೆ, ಚಿನ್ನಮ್ಮ ಜೈಲುಪಾಲಾಗಿದ್ದಾಳೆ. ಇತ್ತ ಚಿನ್ನಮ್ಮ ಜೈಲು ಸೇರುವ ಮೊದಲು ಎಐಎಡಿಎಂಕೆಗೆ ತನ್ನ ವಾರಸ್ದಾರನಾಗಿ ಟಿಟಿವಿ ದಿನಕರನ್'ನನ್ನು ನೇಮಕ ಮಾಡಿದರು. ಭ್ರಷ್ಟಾಚಾರ, ವಂಚನೆ ಹೆಸರಲ್ಲಿ ಜೈಲುಪಾಲಾಗಿದ್ದ ಟಿಟಿವಿ ದಿನಕರನ್, ಕಳೆದ ವಾರ ಜಾಮೀನು ಪಡೆದಿದ್ದೇ ತಡ ಚಿನ್ನಮ್ಮನ ದರ್ಶನಕ್ಕೆ ಬಂದಿದ್ದರು.
'ನಾನು ಚಿನ್ನಮ್ಮನ ಸೋದರಳಿಯನಲ್ಲ, ಅವರ ಪ್ರತಿನಿಧಿ’
ಪುರಿಚ್ಚಿ ತಲೈವಿ ಯುಗಾಂತ್ಯದ ಬಳಿಕ ಎಐಎಡಿಎಂಕೆ ಒಡೆದು ಚೂರಾಗಿತ್ತು. ಒಂದೆಡೆ ಚಿನ್ನಮ್ಮ ಜೈಲು ಸೇರಿದರೆ, ಇನ್ನೊಂದೆಡೆ ಚಿನ್ನಮ್ಮನ ಪ್ರತಿನಿಧಿ ಟಿಟಿವಿ ದಿನಕರನ್ ಕೂಡ ಜೈಲು ಪಾಲಾಗಿದ್ದರು. ಆದರೆ ಕಳೆದ ವಾರವಷ್ಟೇ ದಿನಕರನ್ ಜಾಮೀನು ಪಡೆದು ರಿಲೀಸ್ ಆಗಿದ್ದು, ನಿನ್ನೆ ಪರಪ್ಪನ ಅಗ್ರಹಾರದಲ್ಲಿರುವ ಚಿನ್ನಮ್ಮನನ್ನ ಭೇಟಿ ಮಾಡಿದರು.
ದಿನಕರನ್ ಜೊತೆ ಬಂದ 6 ಶಾಸಕರಿಗೆ ಮಾತ್ರ ಪ್ರವೇಶ ಅವಕಾಶ
ಶಶಿಕಲಾ ಜೈಲು ಸೇರುವ ಮುನ್ನ ದಿನಕರನ್'ನನ್ನು ಎಐಎಡಿಎಂಕೆ ಡೆಪ್ಯೂಟಿ ಸೆಕ್ರೆಟರಿ ಸ್ಥಾನಕ್ಕೆ ನೇಮಿಸಿದ್ದರು. ಆದರೆ ಭ್ರಷ್ಟಾಚಾರದ ಆರೋಪದಡಿ ಜೈಲುಪಾಲಾಗಿದ್ದ ದಿನಕರನ್, ವಾಪಸ್ ಬಂದಿದ್ದೇ ತಡ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ‘ನಾನು ಎಐಎಡಿಎಂಕೆ ಪಕ್ಷದ ಡೆಪ್ಯೂಟಿ ಜನರಲ್ ಸೆಕ್ರೆಟರಿ, ಇದು ನನ್ನ ಪುನಾರಾಗಮನ’ ಎಂದಿದ್ದಾರೆ. ಇನ್ನೂ ಶಶಿಕಲಾ ಭೇಟಿಗೆ ಆಗಮಿಸಿದ್ದ ಟಿಟಿವಿ ದಿನಕರನ್ ಜೊತೆ 10 ಶಾಸಕರು ಬಂದಿದ್ದರು. ಆದರೆ ಜೈಲಿನಲ್ಲಿ ಕೇವಲ 6 ಮಂದಿ ಶಾಸಕರಿಗೆ ಮಾತ್ರ ಅವಕಾಶ ನೀಡಲಾಯಿತು. ದಿನಕರನ್ ಹಾಗೂ ಶಾಸಕರು ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಚಿನ್ನಮ್ಮನನ್ನ ಭೇಟಿ ಮಾಡಿದ ದಿನಕರನ್ ನಾನು ಚಿನ್ನಮ್ಮನ ಮಾರ್ಗದರ್ಶನದಂತೆ ನಡೆದುಕೊಳ್ತೇನೆ. ಚಿನ್ನಮ್ಮನ ಸಲಹೆಯಂತೆ ಪಕ್ಷದ ಕಾರ್ಯ ಚಟುವಟಿಕೆಗಳನ್ನು ನಡೆಸ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಬೇಲ್ ಮೇಲೆ ಹೊರ ಬಂದ ದಿನಕರನ್ ಮತ್ತೆ ರಾಜಕೀಯ ಚಟುವಟಿಕೆ ಆರಂಭಿಸಿದ್ದು.. ಜೈಲಿನಲ್ಲಿದ್ರು ಕಿಂಗ್ ಮೇಕರ್ ಶಶಿಕಲಾ ತನ್ನಿಷ್ಟದಂತೆ ದಾಳ ಉರುಳಿಸುತ್ತಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.