7.5ರ ತೀವ್ರತೆಯಲ್ಲಿ ಭಾರೀ ಭೂಕಂಪ, ಸುನಾಮಿ

By Web DeskFirst Published Sep 29, 2018, 8:23 AM IST
Highlights

10 ಕಿ.ಮೀ. ಆಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅಲ್ಲದೇ ಭೂ ಕಂಪನದಿಂದ ಭಾರೀ ಸುನಾಮಿ ಸಂಭವಿಸಿದ್ದು ಜನಜೀವನ ತತ್ತರಿಸಿದೆ. 

ಜಕಾರ್ತ: ಇಂಡೊನೇಷ್ಯಾದ ಸುಲವೆಸಿ ದ್ವೀಪದಲ್ಲಿ ರಿಕ್ಟರ್‌ ಮಾಪಕದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಶುಕ್ರವಾರ ನಡೆದಿದ್ದು, ಓರ್ವ ಮೃತಪಟ್ಟು, ನೂರಾರು ಮನೆಗಳು ನಾಶಗೊಂಡಿವೆ. ಭೂಮಿಯ ಕಂಪನದಿಂದ ಬೆದರಿ ಮನೆಗಳಿಂದ ಹೊರಬಂದ ಜನ ಕೂಗುತ್ತಿದ್ದ ದೃಶ್ಯಗಳು ಕಂಡುಬಂದಿವೆ. 

ವಿವಿಧೆಡೆ ವ್ಯಾಪಕ ಹಾನಿಯಾಗಿದ್ದು, ಸರಣಿ ಕಂಪನ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ಜನರು ಮನೆ, ಕಟ್ಟಡಗಳಿಂದ ಹೊರಗಿರುವಂತೆ ಸೂಚನೆ ನೀಡಲಾಗಿದೆ. ಇನ್ನೊಂದೆಡೆ, ದೇಶದ ದುರಂತ ನಿರ್ವಹಣಾ ಸಂಸ್ಥೆ ಭೂಕಂಪದ ಹಿನ್ನೆಲೆಯಲ್ಲಿ ಮೊದಲು ಸುನಾಮಿ ಮುನ್ನೆಚ್ಚರಿಕೆ ನೀಡಿತ್ತಾದರೂ, ಬಳಿಕ ಅದನ್ನು ಹಿಂಪಡೆದಿದೆ.

 ಸುಲವೆಸಿ ದ್ವೀಪದಲ್ಲಿ 10 ಕಿ.ಮೀ. ಆಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸುಲವೆಸಿ ಪ್ರಾಂತ್ಯದ ರಾಜಧಾನಿ ಪಲು ನಗರಕ್ಕಿಂತ 78 ಕಿ.ಮೀ. ಉತ್ತರದಲ್ಲಿ ಕಂಪನದ ಕೇಂದ್ರ ಬಿಂದುವಾಗಿತ್ತು ಎಂದು ಅಮೆರಿಕ ಭೂವಿಜ್ಞಾನ ಸಂಸ್ಥೆ ತಿಳಿಸಿದೆ. ಡೊಂಗಲ ಪ್ರದೇಶದಲ್ಲಿ ಹೆಚ್ಚು ಹಾನಿ ಸಂಭವಿಸಿದೆ.

click me!