ನೀಲಿಚಿತ್ರ ತಾರೆಗೆ ನಾನೇ ನನ್ನ ಹಣ ನೀಡಿದ್ದೆ: ಟ್ರಂಪ್‌ ವಕೀಲ

Published : Feb 15, 2018, 09:26 AM ISTUpdated : Apr 11, 2018, 12:36 PM IST
ನೀಲಿಚಿತ್ರ ತಾರೆಗೆ ನಾನೇ ನನ್ನ ಹಣ ನೀಡಿದ್ದೆ: ಟ್ರಂಪ್‌ ವಕೀಲ

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದ ನೀಲಿಚಿತ್ರ ತಾರೆ ಸ್ಟಿಫಾನಿ ಕ್ಲಿಫರ್ಡ್‌ಗೆ ತಮ್ಮ ಸ್ವಂತ ಖಾತೆಯಿಂದ ಹಣ ನೀಡಿರುವುದಾಗಿ ಟ್ರಂಪ್‌ರ ನ್ಯಾಯವಾದಿ ಮೈಕಲ್‌ ಕೊಹೇನ್‌ ಹೇಳಿದ್ದಾರೆ.

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದ ನೀಲಿಚಿತ್ರ ತಾರೆ ಸ್ಟಿಫಾನಿ ಕ್ಲಿಫರ್ಡ್‌ಗೆ ತಮ್ಮ ಸ್ವಂತ ಖಾತೆಯಿಂದ ಹಣ ನೀಡಿರುವುದಾಗಿ ಟ್ರಂಪ್‌ರ ನ್ಯಾಯವಾದಿ ಮೈಕಲ್‌ ಕೊಹೇನ್‌ ಹೇಳಿದ್ದಾರೆ.

‘2016ರಲ್ಲಿ, ಖಾಸಗಿ ವ್ಯವಹಾರವೊಂದರಲ್ಲಿ, ನಾನು ನನ್ನ ವೈಯಕ್ತಿಕ ಖಾತೆಯಿಂದ ಸ್ಟಿಫಾನಿಗೆ 84 ಲಕ್ಷ ರು. ಹಣ ಪಾವತಿಸಿದ್ದೇನೆ. ಸ್ಟಿಫಾನಿ ಜೊತೆಗಿನ ಹಣಕಾಸು ವ್ಯವಹಾರಕ್ಕೆ ಟ್ರಂಪ್‌ ಸಂಸ್ಥೆಯಾಗಲೀ, ಟ್ರಂಪ್‌ ಪ್ರಚಾರ ತಂಡವಾಗಲೀ ಪಕ್ಷಗಾರರಲ್ಲ. ಈ ಹಣ ನನಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾಗಲೀ ಹಿಂಪಾವತಿಯಾಗಿಲ್ಲ ಎಂದು ಕೊಹೇನ್‌ ಹೇಳಿದ್ದಾರೆ. ಹಣಕಾಸು ವ್ಯವಹಾರ ಕಾನೂನು ಬದ್ಧವಾಗಿದ್ದು, ಇದು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ್ದುದಲ್ಲ’ ಎಂದು ಕೊಹೇನ್‌ ಸ್ಪಷ್ಟಪಡಿಸಿದ್ದಾರೆ.

‘ಕೆಲವೊಂದು ಬಾರಿ ವಿಷಯ ಸತ್ಯವಲ್ಲವಾದರೂ, ಅದರಿಂದ ಯಾವುದೇ ಹಾನಿಯಾಗುವುದಿಲ್ಲ, ನಷ್ಟವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಯಾವಾಗಲೂ ಟ್ರಂಪ್‌ರನ್ನು ರಕ್ಷಿಸುತ್ತೇನೆ’ ಎಂದು ಕೊಹೇನ್‌ ತಿಳಿಸಿದ್ದಾರೆ. ಟ್ರಂಪ್‌ ಜೊತೆಗಿನ ಸಂಬಂಧ ಮುಚ್ಚಿಡಲು ಸ್ಟಿಫಾನಿಗೆ ಹಣಪಾವತಿಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ, ಟ್ರಂಪ್‌ ಈ ಆರೋಪ ನಿರಾಕರಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಪಾಕಿಸ್ತಾನಿ ನಾಯಕನ ಹೆಸರಿನಲ್ಲಿ ಮುಂಬೈನಲ್ಲಿ ಇನ್ನೂ ಇದೆ 2.5 ಎಕರೆಯ ಬೃಹತ್ ಬಂಗ್ಲೆ
ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು