ಟ್ರಾಫಿಕ್ ಹೊಸ ನೀತಿಗೂ ಜಗ್ಗದ ಜನ; 15 ದಿನದಲ್ಲಿ 80 ಲಕ್ಷ ರೂ ದಂಡ!

By Web DeskFirst Published Aug 9, 2019, 9:26 AM IST
Highlights

ಹೊಸ ಸಂಚಾರಿ ನಿಯಮ ತಂದರೂ ಎಚ್ಚೆತ್ತಿಲ್ಲ ಜನ | ಟ್ರಾಫಿಕ್ ಉಲ್ಲಂಘನೆ ಪ್ರಮಾಣ ತಗ್ಗಿಲ್ಲ | 15 ದಿನಗಳಲ್ಲಿ 80 ಲಕ್ಷ ರೂ ದಂಡ ವಸೂಲಿ ಮಾಡಿರುವ ಪೊಲೀಸರು 

ಬೆಂಗಳೂರು (ಆ. 09): ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡ ವಿಧಿಸುವ ಹೊಸ ನಿಯಮ ಜಾರಿ ಬಂದ ಬಳಿಕವೂ ಕೂಡ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ಕೇವಲ 15 ದಿನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಂದ ರಾಜಧಾನಿ ಪೊಲೀಸರು ಸುಮಾರು .80 ಲಕ್ಷ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡಿ ನಿಯಮ ಉಲ್ಲಂಘಿಸಿದರವರಿಂದ .17.34 ಲಕ್ಷ ದಂಡ ಸಂಗ್ರಹವಾಗಿದ್ದರೆ, ಅಪಾಯಕಾರಿ ರೀತಿಯಲ್ಲಿ ಸರಕು ಸಾಗಿಸಿದ ವಾಹನಗಳಿಂದ . 25.13 ಲಕ್ಷ ದಂಡ ಸೇರಿದಂತೆ ಒಟ್ಟಾರು ಸುಮಾರು .80 ಲಕ್ಷ ಸಂಗ್ರಹಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಅತಿ ವೇಗದ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ನಿರತ ವಾಹನ ಚಾಲನೆ, ವಿಮೆ ಇಲ್ಲದ ಇಲ್ಲದ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಪ್ರಕರಣಗಳ ದಂಡದ ಮೊತ್ತವನ್ನು ಸರಾಸರಿ ಶೇ.60ರಷ್ಟುಹೆಚ್ಚಿಸಿ ರಾಜ್ಯ ಸಾರಿಗೆ ಇಲಾಖೆ ಜೂ.25 ರಂದು ಸರಕಾರ ಆದೇಶ ಹೊರಡಿಸಿತ್ತು. ಈ ನೂತನ ಆದೇಶ ಜುಲೈ 24ರಿಂದ ಜಾರಿಗೆ ಬಂದಿತ್ತು. ಆದರೆ ಈ ಭಾರೀ ದಂಡದ ವಿಧಿಸುವ ಆದೇಶ ಜಾರಿಗೆ ಬಂದ ಬಳಿಕವೂ ಸಂಚಾರ ನಿಯಮ ಮಾತ್ರ ಕಡಿಮೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ನಿಯಮ ಉಲ್ಲಂಘನೆ ವಿಧ ಪ್ರಕರಣ ಸಂಗ್ರಹಿಸಿದ ಮೊತ್ತ

*ನಿರ್ಲಕ್ಷ್ಯ ಅಥವಾ ಅಪಾಯಕಾರಿ ವಾಹನ ಚಾಲನೆ 1563 15.63 ಲಕ್ಷ

*ವೇಗದ ಮಿತಿ ಮೀರಿ ಚಾಲನೆ 1938 19.38 ಲಕ್ಷ

*ವಿಮೆ ಇಲ್ಲದ ವಾಹನ ಚಾಲನೆ 646 6.46 ಲಕ್ಷ

*ಅಪಾಯಕಾರಿಯಾಗಿ ಸರಕು ಸಾಗಣೆ 2513 25.13 ಲಕ್ಷ

*ರಾಂಗ್‌ ಪಾರ್ಕಿಂಗ್‌ 1433 14.33 ಲಕ್ಷ

click me!