
ಅಹಮದಾಬಾದ್[ಏ.30]: ಸಂಚಾರಿ ನಿಯಮ ಉಲ್ಲಂಘಿಸುವುದು ತಪ್ಪು ಹಾಗೂ ಇದಕ್ಕೆ ದಂಡ ಭರಿಸಬೇಕಾಗುತ್ತದೆ. ಆದರೆ ಗುಜರಾತ್ ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕನಿಗೆ ಆತನ ಪ್ರೀತಿ ಪರ್ಮನೆಂಟ್ ಆಗಿ ಸಿಕ್ಕಿದೆ. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ವಿವರ
ವತ್ಸಲ್ ಪಾರೆಖ್ ಹೆಸರಿನ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ. ಈ ವೇಳೆ ಟ್ರಾಫಿಲ್ ಸಿಗ್ನಲ್ ನಿಯಮ ಬ್ರೇಕ್ ಮಾಡಿ ಬೈಕ್ ಚಲಾಯಿಸಿದ್ದ. ಇದನ್ನು ಗಮನಿಸಿದ್ದ ಟ್ರಾಫಿಕ್ ಪೊಲೀಸ್ ಬೈಕ್ ನಂಬರ್ ಗಮನಿಸಿ ಆತನ ಮನೆಗೆ ದಂಡ ವಿಧಿಸಿ ಚಲನ್ ಕಳುಹಿಸಿದ್ದರು.
ಆದರೆ ಪೊಲೀಸರು ಕಳುಹಿಸಿದ್ದ ಈ ರಸೀದಿ ಯುವಕನ ಮನೆಯವರ ಕೈ ಸೇರಿತ್ತು. ಪೊಲೀಸರು ಈ ರಶೀದಿಯೊಂದಿಗೆ ಯುವಕ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಫೋಟೋವನ್ನು ಕಳುಹಿಸಿದ್ದರು. ಫೋಟೋದಲ್ಲಿ ತಮ್ಮ ಮನೆ ಮಗನೊಂದಿಗೆ ಯುವತಿಯೊಬ್ಬಳು ಬೈಕ್ ನಲ್ಲಿರುವುದನ್ನು ಗಮನಿಸಿದ ಮನೆಯವರು ವತ್ಸಲ್ ಮನೆಗೆ ಬರುತ್ತಿದ್ದಂತೆಯೇ ಆಕೆಯ ಕುರಿತಾಗಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಆಕೆಯನ್ನು ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಬೇಕೆಂಬ ಆಸೆ ಇದೆ ಎಂಬ ವಿಚಾರ ವತ್ಸಲ್ ಬಾಯ್ಬಿಟ್ಟಿದ್ದಾನೆ. ಇದನ್ನು ಕೆಳಿದ ಮನೆ ಮಂದಿ ಯುವತಿಯ ತಂದೆ ತಾಯಿಯನ್ನು ಭೇಟಿಯಾಗಿ ಮಕ್ಕಳು ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ತಿಳಿಸಿದ್ದಾರೆ ಹಾಗೂ ಮದುವೆ ಮಾತುಕತೆ ನಡೆಸಿದ್ದಾರೆ.
ಇದನ್ನು ತಿಳಿದ ಯುವಕನಿಗೆ ಬಹಳಷ್ಟು ಖುಷಿಯಾಗಿದೆ. ಇದೇ ಖುಷಿಯಲ್ಲಿ ಅಹಮದಾಬಾದ್ ಪೊಲೀಸರಿಗೆ ದಂಡ ವಿಧಿಸಿ ಮನೆಗೆ ರಶೀದಿ ಜೊತೆಗೆ ಫೋಟೋ ಕಳುಹಿಸಿದ್ದಕ್ಕಾಗಿ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.