ಸಿಸಿಬಿಗೆ ತಲೆನೋವಾಯ್ತು ಬೆಳಗೆರೆ ಸಿಗರೇಟ್ ಚಟ..!

Published : Dec 10, 2017, 09:34 PM ISTUpdated : Apr 11, 2018, 01:07 PM IST
ಸಿಸಿಬಿಗೆ ತಲೆನೋವಾಯ್ತು ಬೆಳಗೆರೆ ಸಿಗರೇಟ್ ಚಟ..!

ಸಾರಾಂಶ

ರವಿ ಬೆಳಗೆರೆ ಸುಪಾರಿ ಪ್ರಕರಣದ ಬೆನ್ನತ್ತಿ ಹೊರಟ ಸಿಸಿಬಿ ನಿರಂತರವಾಗಿ ಬೆಳಗೆರೆ ವಿಚಾರಣೆ ನಡೆಸುತ್ತಿದೆ.  ಇವತ್ತು ಕೂಡ ಕೆಲ ಸ್ಫೋಟಕ ಮಾಹಿತಿಗಳನ್ನ ಅಧಿಕಾರಿಗಳು ಹೊರಗೆಳೆದಿದ್ದಾರೆ. ಆದರೆ ಬೆಳಗೆರೆ ಸಿಗರೇಟ್ ಟಾರ್ಚರ್​'ಗೆ ಅಧಿಕಾರಿಗಳೇ ಸುಸ್ತು ಹೊಡೆದಿದ್ದಾರೆ.

ಬೆಂಗಳೂರು (ಡಿ.10): ರವಿ ಬೆಳಗೆರೆ ಸುಪಾರಿ ಪ್ರಕರಣದ ಬೆನ್ನತ್ತಿ ಹೊರಟ ಸಿಸಿಬಿ ನಿರಂತರವಾಗಿ ಬೆಳಗೆರೆ ವಿಚಾರಣೆ ನಡೆಸುತ್ತಿದೆ.  ಇವತ್ತು ಕೂಡ ಕೆಲ ಸ್ಫೋಟಕ ಮಾಹಿತಿಗಳನ್ನ ಅಧಿಕಾರಿಗಳು ಹೊರಗೆಳೆದಿದ್ದಾರೆ. ಆದರೆ ಬೆಳಗೆರೆ ಸಿಗರೇಟ್ ಟಾರ್ಚರ್​'ಗೆ ಅಧಿಕಾರಿಗಳೇ ಸುಸ್ತು ಹೊಡೆದಿದ್ದಾರೆ.

ರವಿ ಬೆಳಗೆರೆ ಸಿಗರೇಟ್ ಚಟ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಕೋರ್ಟ್‌ ಆದೇಶದಂತೆ ಇವತ್ತು ರವಿ ಬೆಳಗೆರೆಯವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗೆ ಕರೆತರಲಾಯಿತು. ಆದರೆ ಸಿಗರೇಟ್ ಕೊಡುವವರೆಗೂ  ಕಾರಿನಿಂದ ಇಳಿಯಲ್ಲ ಎಂದು ಕಾರಿನ ಡೋರ್​ಗೆ  ರವಿ ಕಾಲು ಅಡ್ಡಹಾಕಿ ಕುಳಿತರು.  ಸಿಗರೇಟ್ ಕೊಟ್ಟ ಮೇಲೆ ಕಾರಿಂದ ಇಳಿದರು.

ಇನ್ನೂ ಆಸ್ಪತ್ರೆಯಲ್ಲೂ ಹೈಡ್ರಾಮಾ ಮುಂದುವರಿತು. ವ್ಹೀಲ್ ಚೇರ್​'ಗೆ ಕಾಲು ತಗುಲಿ ಗಾಯಗವಾಗಿದ್ದರಿಂದ ಬ್ಯಾಂಡೇಜ್ ಹಾಕಿದರೆ ಇನ್ನೊಂದು ಕಾಲಿಗೂ ಬ್ಯಾಂಡೇಜ್ ಹಾಕುವಂತೆ ಪಟ್ಟು ಹಿಡಿದರು. ಇನ್ನು ರವಿ ಬೆಳೆಗೆರೆ ಮನೆಯಲ್ಲಿ ಸಿಕ್ಕ ಜಿಂಕೆ ಚರ್ಮ ಮತ್ತು ಆಮೆ ಚರ್ಮ ಸಂಬಂಧ ಸಿಸಿಬಿ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಪ್ರತ್ಯೇಕ  ದೂರು ದಾಖಲಿಸಿಕೊಂಡಿದ್ದಾರೆ.  ಇದರ ಬೆಲೆ 25 ಸಾವಿರ ಮೀರಿದ್ರೆ ಈ ಕೇಸ್ ಬೆಳಗೆರೆಗೆ ಮತ್ತಷ್ಟು ಕಂಟಕವಾಗಲಿದೆ. ಇನ್ನೂ ಬೆಳಗರೆ ಸುಪಾರಿ ಪ್ರಕರಣದ ಜಾಡುಹಿಡಿದು ಹೊರಟ ಸಿಸಿಬಿಗೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರವಿಬೆಳೆಗೆರೆ ಖಾಸಗಿ ಚಾನಲ್'ನ ಸಂಪಾದಕರಾಗಿದ್ದಾಗ ರೌಡಿ ಶೀಟರ್ ಜೆಸಿಬಿ ನಾರಾಯಣನ ಬಳಿ ಟಾಟ ಸಫಾರಿ ಕಾರನ್ನು ಪಡೆದಿದ್ದರೆಂದು ಸುನಿಲ್ ಹೆಗ್ಗರವಳ್ಳಿ ಸತ್ಯ ಬಿಚ್ಚಿಟ್ಟಿದ್ದಾರೆ. ಈ ಕಾರಿನ ಮೇಲೆ ಸಾಕಷ್ಟು ಕೇಸ್ ಗಳಿದ್ದರೂ ಅದೇ ಕಾರನ್ನು ರವಿ ಬೆಳಗೆರೆ ಬಳಸುತ್ತಿದ್ದರಂತೆ.

ಸಿಸಿಬಿಯಲ್ಲಿ 3 ದಿನ ಕಳೆದಿರುವ ರವಿಬೆಳೆಗೆರೆಯನ್ನು ನಾಳೆ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ರವಿ ಬೆಳಗೆರೆ ಪರ ವಕೀಲರು ನಾಳೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ