
ಬೆಂಗಳೂರು(ಜ.15): ಮಾರ್ಚ್/ಏಪ್ರಿಲ್'ನಲ್ಲಿ ನಡೆಯಲಿರುವ ಎಸ್'ಎಸ್'ಎಲ್'ಸಿ ಪರೀಕ್ಷೆ ಸಿದ್ಧತೆ ಕುರಿತು ಆಕಾಶ ವಾಣಿಯು ಜ.16ರಿಂದ ಮಾ.20ರವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಣಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಮತ್ತು ಮಾನಸಿಕವಾಗಿ ಪರೀಕ್ಷೆಗೆ ಹೇಗೆ ಸದೃಢರಾಗಬೇಕು ಎಂದು ತಜ್ಞರು, ವೈದ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ನೀಡಲಿದೆ. ಪ್ರಮುಖವಾಗಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಕುರಿತು ಮಾಹಿತಿ ನೀಡಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 2.35ರಿಂದ 3.05 ನಿಮಿಷದವರೆಗೆ ರಾಜ್ಯದ ಎಲ್ಲಾ 13 ಬಾನುಲಿ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿದೆ. ಇದೇ ಕಾರ್ಯಕ್ರಮ ಎಫ್.ಎಂ. ರೈನ್ ಬೋ (101.3) ದಲ್ಲಿ ಸಂಜೆ 5.30ರಿಂದ 6 ಗಂಟೆಯವರೆಗೆ ಅರ್ಧ ಗಂಟೆ ಕಾಲ ಪ್ರಸಾರಗೊಳ್ಳಲಿದೆ.
ಸೋಮವಾರ ಗಣಿತ, ಮಂಗಳವಾರ ವಿಜ್ಞಾನ, ಬುಧವಾರ ಸಮಾಜ ವಿಜ್ಞಾನ, ಗುರುವಾರ ಇಂಗ್ಲಿಷ್ ಮತ್ತು ಶುಕ್ರವಾರ ಕೆಲವು ಪಾಠಗಳನ್ನು ಮಾತ್ರ ಪ್ರಸಾರ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.