ಯಾರಾಗ್ತಾರೆ ಪಂಚರಾಜ್ಯಗಳ ಸುಲ್ತಾನ?: ಬಿಗ್ ಫೈಟ್ ಗೆ ಇಂದು ಫೈನಲ್ ರಿಸಲ್ಟ್

Published : Mar 11, 2017, 01:20 AM ISTUpdated : Apr 11, 2018, 12:46 PM IST
ಯಾರಾಗ್ತಾರೆ ಪಂಚರಾಜ್ಯಗಳ ಸುಲ್ತಾನ?: ಬಿಗ್ ಫೈಟ್ ಗೆ ಇಂದು ಫೈನಲ್ ರಿಸಲ್ಟ್

ಸಾರಾಂಶ

ದೇಶಾದ್ಯಂತ ಭಾರೀ ಕುತೂಹಲ ಹುಟ್ಟಿಸಿರುವ ಪಂಚರಾಜ್ಯಗಳ ಬಿಗ್ ಫೈಟ್​​ಗೆ ಇಂದೇ ತೆರೆ ಬೀಳಲಿದೆ. ಈಗಾಗಲೇ ನಾನಾ ಸಂಸ್ಥೆಗಳು ಸೋಲು ಗೆಲುವಿನ ಸಮೀಕ್ಷೆಯನ್ನ ಹೊರ ಹಾಕಿವೆ. ಬಿಜೆಪಿ ಗೆಲುವಿನ ರಥ ಏರಿದೆ ಅಂತ ಹೆಚ್ಚು ಕಮ್ಮಿ ಎಲ್ಲಾ ಸಮಿಕ್ಷೆಗಳು ಅಂದಾಜಿಸಿವೆ. ಆದ್ರೆ ಒಂದೊಂದು ಸಂಸ್ಥೆಯ ಸಮೀಕ್ಷೆಯು ಒಂದೊಂದು ರೀತಿ ಫಲಿತಾಂಶವನ್ನು ನೀಡಿದ್ದು, ಇವತ್ತಿನ ಫಲಿತಾಂಶವೇ ಎಲ್ಲದಕ್ಕೂ ತೆರೆಎಳೆಯಲಿದೆ.

Election Live Blog

ನವದೆಹಲಿ(ಮಾ.11): ದೇಶಾದ್ಯಂತ ಭಾರೀ ಕುತೂಹಲ ಹುಟ್ಟಿಸಿರುವ ಪಂಚರಾಜ್ಯಗಳ ಬಿಗ್ ಫೈಟ್​​ಗೆ ಇಂದೇ ತೆರೆ ಬೀಳಲಿದೆ. ಈಗಾಗಲೇ ನಾನಾ ಸಂಸ್ಥೆಗಳು ಸೋಲು ಗೆಲುವಿನ ಸಮೀಕ್ಷೆಯನ್ನ ಹೊರ ಹಾಕಿವೆ. ಬಿಜೆಪಿ ಗೆಲುವಿನ ರಥ ಏರಿದೆ ಅಂತ ಹೆಚ್ಚು ಕಮ್ಮಿ ಎಲ್ಲಾ ಸಮಿಕ್ಷೆಗಳು ಅಂದಾಜಿಸಿವೆ. ಆದ್ರೆ ಒಂದೊಂದು ಸಂಸ್ಥೆಯ ಸಮೀಕ್ಷೆಯು ಒಂದೊಂದು ರೀತಿ ಫಲಿತಾಂಶವನ್ನು ನೀಡಿದ್ದು, ಇವತ್ತಿನ ಫಲಿತಾಂಶವೇ ಎಲ್ಲದಕ್ಕೂ ತೆರೆಎಳೆಯಲಿದೆ.

ಇಂದು ಮಧ್ಯಾಹ್ನದ ಒಳಗೆ ಪಂಚರಾಜ್ಯಗಳ ಬಿಗ್ ಫೈಟ್ ನ ಭಾಗಶಾ ಫಲಿತಾಂಶ ಹೊರಬೀಳಲಿದೆ. ಬಿಜೆಪಿ, ಕಾಂಗ್ರೆಸ್, ಎಸ್​ಪಿ, ಆಪ್ ಗಳ ಸೇರು-ಸವ್ವಾಸೇರು ಹೋರಾಟಕ್ಕೆ, ಮತದಾರ ನೀಡಿದ ರಿಸಲ್ಟ್ ಬಹಿರಂಗವಾಗಲಿದೆ. ಪಂಜರಾಜ್ಯ ಗೆದ್ದು ಪಾಂಚಜನ್ಯ ಮೊಳಗಿಸುವವರ್ಯಾರು ಎಂಬ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

ಯಾರಾಗ್ತಾರೆ ಪಂಚರಾಜ್ಯಗಳ ಸುಲ್ತಾನ?

ಡಿಜಿಟಲ್ ಇಂಡಿಯಾ ಮಾಡಿ ಜನ್ರನ್ನ ಗೆಲ್ಲುತ್ತಿರುವ ಕಮಲ ಪಡೆಯ ಮೋದಿ ಒಂದೆಡೆಯಾದ್ರೆ. ಮೋದಿಯನ್ನ ಸೋಲಿಸಿ ಗೆಲುವು ಸಾಧಿಸಲೇ ಬೇಕು ಅಂತಾ ದಾಯಾದಿ ಕಲಹ ಮರೆತು, ಕಾಂಗ್ರೆಸ್ ಜೊತೆ ಕೈ ಜೋಡಿಸಿ ಮತಯಾಚಿಸಿದ ಅಖಿಲೇಶ್ ಮತ್ತು ರಾಹುಲ್ ಗಾಂಧಿ  ಇನ್ನೊಂದೆಡೆ. ಇವ್ರ ಮಧ್ಯೆ ಮಾಯಾವತಿ, ಕೇಜ್ರಿವಾಲ್ ಕೂಡ ಗೆಲುವಿನ ಬೆನ್ನಟ್ಟಿದ್ದಾರೆ. ಆದ್ರೆ ಸಮೀಕ್ಷೆಗಳ ಪ್ರಕಾರ ಈಗಾಗಲೇ ಬಿಜೆಪಿ 4 ರಾಜ್ಯಗಳಲ್ಲಿ ಜಯಭೇರಿ ಭಾರಿಸಿದೆ.

ಮೋದಿಯ ನೋಟ್ ಬ್ಯಾನ್ ಗೆಲುವು ತಂದುಕೊಡುತ್ತಾ?

ಮೋದಿ ನೋಟ್ ಬ್ಯಾನ್ ನಂತ್ರ ಇದೇ ಮೊದಲ ಚುನಾವಣೆ, ನೋಟ್ ಬ್ಯಾನ್ ಕ್ರಮ ಎಷ್ಟು ಸಕ್ಸಸ್ ಕೊಡುತ್ತೆ ಅನ್ನೋದು ಇಂದು ತಿಳಿಯಲಿದೆ. ಈಗಾಗಲೇ ಕೆಲ ಮತ ಸಮೀಕ್ಷೆಗಳು ಬಿಜೆಪಿ ಜಯಭೇರಿ ಭಾರಿಸಿದೆ ಅಂತಾ ಹೇಳ್ತಿವೆ. ಆದ್ರೆ ಸಮೀಕ್ಷೆಗಳಲ್ಲೇ ಗೊಂದಲ ಇರುವುದು ಈಗಾಗಲೇ ರುಜುವಾತಾಗಿದ್ದು ಕ್ಲಿಯರ್ ಪಿಕ್ಟರ್ ಯಾರಿಗೂ ಸಿಗುತ್ತಿಲ್ಲ.

ಎಸ್ ಪಿ ಜೊತೆ ಮೈತ್ರಿಯಾದರೂ ‘ಕೈ’ ಗೆಲುವು ಕನಸಾಗುತ್ತಾ?

ಒಟ್ಟಿನಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಮತ ಏಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆ ಅಷ್ಟರಲ್ಲಿ ಪಂಚರಾಜ್ಯಗಳ ಪಾಂಜಜನ್ಯ ಮೊಳಗಿಸುವ ಪ್ರಚಂಡ ಯಾರು ಅನ್ನೋ ಸತ್ಯ ಹೆಚ್ಚು ಕಮ್ಮಿ ಹೊರಬಿದ್ದಿರುತ್ತದೆ.

Election Live Blog

ಉತ್ತರಪ್ರದೇಶ ಚುನಾವಣೆ ಫಲಿತಾಂಶ

ಪಂಜಾಬ್ ಚುನಾವಣೆ ಫಲಿತಾಂಶ

ಉತ್ತರಾಖಂಡ್ ಚುನಾವಣೆ ಫಲಿತಾಂಶ

ಮಣಿಪುರ ಚುನಾವಣೆ ಫಲಿತಾಂಶ

ಗೋವಾ ಚುನಾವಣೆ ಫಲಿತಾಂಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್