
ಐಜ್ವಾಲ್[ಜು.25]: ಕ್ರಿಶ್ಚಿಯನ್ ಪಂಗಡದ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಬಿಜೆಪಿ, ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಿಜೋರಾಂ ರಾಜ್ಯದಲ್ಲಿ ‘ಮಿಷನರಿ ಸೆಲ್’ಗಳನ್ನು ಸ್ಥಾಪಿಸಿದೆ. ಈ ಮೂಲಕ ತಾನು ಅಲ್ಪಸಂಖ್ಯಾತರ ವಿರೋಧಿ ಅಲ್ಲ ಎಂಬುದನ್ನು ಸಾರಿದೆ. ಮಿಜೋರಾಂನಲ್ಲಿ ಶೇ.87 ರಷ್ಟುಕ್ರಿಶ್ಚಿಯನ್ನರೇ ಇದ್ದಾರೆ.
ಬಿಜೆಪಿ ಕ್ರಿಶ್ಚಿಯನ್ನರ ಏಳ್ಗೆ ಬಯಸಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಲ ಚಚ್‌ರ್‍ಗಳು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದವು. ಇದರಿಂದ ವಿಮುಕ್ತರಾಗಲು ಬಿಜೆಪಿ ಈ ಹೆಜ್ಜೆ ಇಟ್ಟಿದೆ.
ಬಿಜೆಪಿಯ ಈ ಐಡಿಯಾ ಕ್ಲಿಕ್ ಆಗುತ್ತಾ? ಕ್ರೈಸ್ತರ ವಿಶ್ವಾಸ ಗಳಿಸುತ್ತಾ? ಕಾಲವೇ ಉತ್ತರಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.