ಶಾರದಾ ಚಿಟ್‌ಫಂಡ್‌ ಕೇಸ್‌: ಟಿಎಂಸಿ ಸಂಸದನಿಗೆ ಸಿಬಿಐ ಡ್ರಿಲ್!

By Web DeskFirst Published Aug 10, 2019, 11:00 AM IST
Highlights

ಶಾರದಾ ಚಿಟ್‌ಫಂಡ್‌ ಕೇಸ್‌: ಸಿಬಿಐನಿಂದ ಡೆರೆಕ್‌ ವಿಚಾರಣೆ| ಡೆರೆಕ್‌ ಒಡೆತನದ ಬಂಗಾಳಿ ವಾರಪತ್ರಿಕೆ ‘ಜಾಗೋ ಬಾಂಗ್ಲಾ’ ಹೆಸರಿನಲ್ಲಿ ನಡೆಸಿದ್ದಾರೆನ್ನಲಾದ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಮಾಡಿದ್ದಾರೆ

ಕೋಲ್ಕತಾ[ಆ.10]: ಶಾರದಾ ಚಿಟ್‌ಫಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ನ ಸಂಸದ ಡೆರೆಕ್‌ ಓ ಬ್ರಿಯಾನ್‌ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೊಳಪಡಿಸಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಟಿಎಂಸಿ ಮುಖವಾಣಿ ಎಂದೇ ಹೇಳಲಾಗುವ ಡೆರೆಕ್‌ ಒಡೆತನದ ಬಂಗಾಳಿ ವಾರಪತ್ರಿಕೆ ‘ಜಾಗೋ ಬಾಂಗ್ಲಾ’ ಹೆಸರಿನಲ್ಲಿ ನಡೆಸಿದ್ದಾರೆನ್ನಲಾದ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಮಾಡಿದ್ದಾರೆ. ಅಲ್ಲದೆ ಪತ್ರಿಕೆ ಹೆಸರಲ್ಲಿ ವ್ಯವಹಾರ ನಡೆಸಿದ್ದರ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಚಾರಣೆಗೆ ಸಂಬಂಧಿಸಿ ಡೆರೆಕ್‌ ಅವರಿಗೆ ಜುಲೈ 26ರಂದೇ ಆಗಸ್ಟ್‌ ಮೊದಲ ವಾರದಲ್ಲಿ ಹಾಜರಾಗಬೇಕು ಎಂದು ಸಿಬಿಐ ನೋಟಿಸ್‌ ನೀಡಿತ್ತು. ಆದರೆ ಸಂಸತ್‌ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಆ.7ರ ಬಳಿಕ ಹಾಜರಾಗುವುದಾಗಿ ಮನವಿ ಮಾಡಿಕೊಂಡಿದ್ದರು. ಅದೇ ಪ್ರಕಾರ ಶುಕ್ರವಾರ ಸಿಬಿಐ ವಿಚಾರಣೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

click me!