ಬಿಜೆಪಿ ವಿರುದ್ಧ ಇಂದು ವಿಪಕ್ಷಗಳ ಮೆಗಾ ಶೋ : ಯಾರ್ಯಾರು ಬೆಂಬಲ

By Web DeskFirst Published Jan 19, 2019, 8:26 AM IST
Highlights

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶನಿವಾರ ಇಲ್ಲಿ ಬೃಹತ್‌ ರಾರ‍ಯಲಿಯೊಂದನ್ನು ಆಯೋಜಿಸಿದ್ದಾರೆ. ವಿವಿಧ ರಾಜ್ಯಗಳ 20ಕ್ಕೂ ಹೆಚ್ಚು ಪಕ್ಷಗಳ ನಾಯಕರು ಈ ರ್ಯಾಲಿಯಲ್ಲಿ ಭಾಗವಹಿಸುತ್ತಿವೆ.

ಕೋಲ್ಕತಾ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶನಿವಾರ ಇಲ್ಲಿ ಬೃಹತ್‌  ರ್ಯಾಲಿ  ಆಯೋಜಿಸಿದ್ದಾರೆ. ವಿವಿಧ ರಾಜ್ಯಗಳ 20ಕ್ಕೂ ಹೆಚ್ಚು ಪಕ್ಷಗಳ ನಾಯಕರು ಈ ರಾರ‍ಯಲಿಯಲ್ಲಿ ಭಾಗವಹಿಸುತ್ತಿದ್ದು, ಇದು ವಿಪಕ್ಷಗಳ ಶಕ್ತಿಪ್ರದರ್ಶನಕ್ಕಿಂತ ಹೆಚ್ಚಾಗಿ, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಮಮತಾ ಬ್ಯಾನರ್ಜಿ ಅವರ ಸಂಘಟನಾ ಚತುರತೆಗೆ ಮತ್ತು ಶಕ್ತಿಪ್ರರ್ದಶನಕ್ಕೆ ವೇದಿಕೆ ಎಂದೇ ಬಣ್ಣಿಸಲಾಗಿದೆ.

ಕೋಲ್ಕತಾದ ಐತಿಹಾಸಿಕ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ  ರ್ಯಾಲಿ ಆಯೋಜನೆಗೊಂಡಿದ್ದು, ಇದರಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯನ್ನು ಪಕ್ಷ ಇಟ್ಟುಕೊಂಡಿದೆ. ಕಳೆದ 2- 3 ದಿನಗಳಿಂದಲೇ ಟಿಎಂಸಿ ಕಾರ್ಯಕರ್ತರು ಕೋಲ್ಕತಾಕ್ಕೆ ಆಗಮಿಸಿದ್ದು, ರಾರ‍ಯಲಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ರ್ಯಾಲಿಯನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ ಬಿಸಿಮುಟ್ಟಿಸುವುದರ ಜೊತೆಜೊತೆಗೇ, ತಮ್ಮನ್ನು ತಾವು ಮೈತ್ರಿಕೂಟ ಸಂಘಟಿಸಬಹುದಾದ ದೊಡ್ಡ ನಾಯಕಿ ಎಂದು ಬಿಂಬಿಸಿಕೊಳ್ಳಲು ಮಮತಾ ಬ್ಯಾನರ್ಜಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ.

ರ್ಯಾಲಿ ಕುರಿತು ಮಾತನಾಡಿರುವ ಮಮತಾ, ಇದು ಬಿಜೆಪಿಯ ದುರಾಡಳಿತದ ವಿರುದ್ಧ ವಿಪಕ್ಷಗಳ ಸಂಘಟಿತ ರಾರ‍ಯಲಿಯಾಗಿರಲಿದೆ. ಜೊತೆಗೆ ಬಿಜೆಪಿಗೆ ಪತನದ ಮುನ್ಸೂಚನೆಯನ್ನು ಸ್ಪಷ್ಟವಾಗಿ ರವಾನಿಸಲಿದೆ. ಮುಂದಿನ ಚುನಾವಣೆಯಲ್ಲಿ ಕೇಸರಿ ಪಕ್ಷದ ಬಲ 125ನ್ನು ದಾಟುವುದಿಲ್ಲ. ಬಿಜೆಪಿಗಿಂತ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷಗಳೇ ಹೆಚ್ಚಿನ ಸ್ಥಾನಗಳಿಸಲಿವೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಘೋಷಿಸಿದರು.

ಸೋನಿಯಾ, ರಾಹುಲ್‌ ಇಲ್ಲ: ಬಿಜೆಪಿ ವಿರುದ್ಧ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಶನಿವಾರದ ರಾರ‍ಯಲಿಗೆ ಗೈರಾಗುತ್ತಿದ್ದಾರೆ. ಅದರಲ್ಲೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರ್ಯಾಲಿಗೆ ಗೈರಾಗುತ್ತಿರುವುದು ಹಿನ್ನೆಡೆ ಎಂದೇ ಭಾವಿಸಲಾಗಿದೆ. ಇದರ ಜೊತೆಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಕೂಡಾ ತಾವು ಭಾಗಿಯಾಗುವ ಬದಲು ತಮ್ಮ ಆಪ್ತ ಮಿಶ್ರಾರನ್ನು ಕಳುಹಿಸಿಕೊಡುವ ಮೂಲಕ ಜಾಣ ನಡೆ ಇರಿಸಿದ್ದಾರೆ ಎನ್ನಲಾಗಿದೆ.

ರಾಹುಲ್‌ ಪತ್ರ: ಶನಿವಾರದ ರ್ಯಾಲಿಗೆ ಗೈರಾಗುತ್ತಿರುವ ರಾಹುಲ್‌ಗಾಂಧಿ, ಮಮತಾಗೆ ಪತ್ರ ಬರೆದು, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಅಖಂಡತೆ ಮತ್ತು ಭರವಸೆಯ ಮೂಲಕ ಸಮಗ್ರ ಭಾರತದ ಸಂದೇಶ ರವಾನಿಸಲು ಮುಂದಾಗಿರುವ ಮಮತಾ ಜೀ ಅವರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ’ ಎಂದು ರಾಹುಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1955 ರಾರ‍ಯಲಿಗಿಂತಲೂ ದೊಡ್ಡದು: 1955ರಲ್ಲಿ ರಷ್ಯಾ ಅಧ್ಯಕ್ಷ ನಿಕೋಲಾಯ್‌ ಬಲ್ಗನಿನ್‌ ಮತ್ತು ಸೋವಿಯತ್‌ ಒಕ್ಕೂಟದ ಕಮ್ಯುನಿಸ್ಟ್‌ ನಾಯಕ ನಿಕಿತಾ ಕ್ರುಶ್ಚೇವ್‌ ಕೋಲ್ಕತಾಕ್ಕೆ ಆಗಮಿಸಿದ್ದ ವೇಳೆ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಬೃಹತ್‌ ರ್ಯಾಲಿ ಆಯೋಜಿಸಲಾಗಿತ್ತು. ಆಗ ಸೋವಿಯತ್‌ ನಾಯಕರನ್ನು ಜವಾಹರ ಲಾಲ್‌ ನೆಹರೂ ಸನ್ಮಾನಿಸಿದ್ದರು. ಆಗಿನ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಇನ್ನು 1977ರಲ್ಲಿ ಆಯೋಜನೆಗೊಂಡಿದ್ದ ರ್ಯಾಲಿಯಲ್ಲಿ ಜ್ಯೋತಿ ಬಸು, ಜಯಪ್ರಕಾಶ್‌ ನಾರಾಯಣ್‌ ಭಾಗಿಯಾಗಿದ್ದರು. ಈ ಎಲ್ಲಾ ರ್ಯಾಲಿಗಳಿಗಿಂತಲೂ ಶನಿವಾರದ ರ್ಯಾಲಿ ಇನ್ನೂ ದೊಡ್ಡ ಮಟ್ಟದ್ದಾಗಿರಲಿದೆ ಎಂದು ಟಿಎಂಸಿ ನಾಯಕರು ಆಶಾಭಾವನೆ ಹೊಂದಿದ್ದಾರೆ.

ಯಾರ್ಯಾರು ಭಾಗಿ?

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕರ್ನಾಟಕ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಕೇಜ್ರಿವಾಲ್‌, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಖಿಲೇಶ್‌, ಡಿಎಂಕೆ ನಾಯಕ ಸ್ಟಾಲಿನ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರುಖ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ, ಎನ್‌ಸಿಪಿಯ ಶರದ್‌ ಪವಾರ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಬಿಎಸ್‌ಪಿಯ ಸತೀಶ್‌ಚಂದ್ರ ಮಿಶ್ರಾ, ಆರ್‌ಎಲ್‌ಡಿಯ ಅಜಿತ್‌ಸಿಂಗ್‌, ಜೆವಿಎಂನ ಬಾಬುಲಾಲ್‌ ಮರಾಂಡಿ, ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌, ದಲಿತ ನಾಯಕ ಜಿಗ್ನೇಶ್‌ ಮೇವಾನಿ, ಬಿಜೆಪಿ ಬಂಡಾಯ ನಾಯಕರಾದ ಯಶವಂತ್‌ ಸಿನ್ಹಾ, ಶತ್ರುಘ್ನ ಸಿನ್ಹಾ, ಬಿಜೆಪಿಯ ಮಾಜಿ ನಾಯಕ ಅರುಣ್‌ ಶೌರಿ.

ಯಾರಾರ‍ಯರು ಗೈರು?

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ, ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌.

ಖರ್ಗೆ ಆಗಮನ ಟಿಎಂಸಿಗೆ ಕಳವಳ

ವಿಪಕ್ಷಗಳ ರಾರ‍ಯಲಿಗೆ ಕಾಂಗ್ರೆಸ್‌ ಬೆಂಬಲ ಘೋಷಿಸಿದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅಭಿಷೇಕ್‌ ಮನು ಸಿಂಘ್ವಿ ಅವರನ್ನು ರಾರ‍ಯಲಿಗೆ ಕಳುಹಿಸಿಕೊಟ್ಟಿದೆ. ಆದರೆ ಬಂಗಾಳದಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ಟಿಎಂಸಿಗೆ, ಇದೀಗ ಕಾಂಗ್ರೆಸ್‌ ನಾಯಕರ ಭಾಗಿ ಇರಿಸುಮುರಿಸು ಉಂಟು ಮಾಡಿದೆ.

click me!