ಮಾರುಕಟ್ಟೆಗೆ ಬಂದಿವೆ ಟಿಶ್ಯೂ ಪೇಪರ್'ನಿಂದ ನಕಲಿ ಮಾತ್ರೆ

By Web DeskFirst Published Aug 9, 2018, 4:55 PM IST
Highlights

 ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಮಾತ್ರೆಗಳನ್ನು ಟಿಶ್ಯೂ ಪೇಪರ್‌ನಿಂದ ಮಾಡಲಾಗುತ್ತಿದೆಯೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿಶ್ಯೂ ಪೇಪರ್ ನಿಂದ ನಕಲಿ ಔಷಧಿಯ ಮಾತ್ರೆಗಳನ್ನು ತಯಾರಿಸಲಾಗುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಹರಿದಾಡುತ್ತಿರುವ ವಿಡಿಯೋದೊಂದಿಗೆ, ‘ವಂಚಕರು ಮಾತ್ರೆಯ ಹೆಸರಿನಲ್ಲಿ ಟಿಶ್ಯೂ ಪೇಪರ್ ಅನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಟಿಶ್ಯೂ ಪೇಪರ್‌ನಿಂದ ಮಾತ್ರೆಗಳನ್ನು ತಯಾರಿಸಿ ಹೊರತೆಗೆಯುವ ದೃಶ್ಯವಿದೆ. ವ್ಯಕ್ತಿಯೊಬ್ಬ ಮಾತ್ರೆಯನ್ನು ಸುತ್ತಿಟ್ಟ ಬಟ್ಟೆಯಂತೆ ಹೊರತೆಗೆಯುತ್ತಾನೆ. 

ಹಾಗೆಯೇ ಒರಿಯಾ ಭಾಷೆಯಲ್ಲಿ ‘ಮಾತ್ರೆ ಕವರ್ ಹಿಂದೆ ಯಾವುದೇ ಕಂಪನಿಯ ಹೆಸರಿಲ್ಲ ಅಥವಾ ಯಾವುದೇ ವಿಳಾಸ, ಮಾತ್ರೆಯ ರಾಸಾಯನಿಕ ಸಂಯೋಜನೆ ಬಗ್ಗೆಯೂ ಮಾಹಿತಿ ಇಲ್ಲ’ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವ ಧ್ವನಿ ಇದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ನಿಜಕ್ಕೂ ಮಾತ್ರೆಗಳನ್ನು ಟಿಶ್ಯೂ ಪೇಪರ್‌ನಿಂದ ಮಾಡಲಾಗುತ್ತಿದೆಯೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ. ಗೂಗಲ್‌ನಲ್ಲಿ ಈ ವಿಡಿಯೋ ಕುರಿತು ಪರಿಶೀಲಿಸಿದಾಗ ಇದು ಒಂದು ತಿಂಗಳ ಹಿಂದಿನ ಪೋಟೋ ಎಂಬುದು ತಿಳಿದಿದೆ.

ಒರಿಯಾ ಭಾಷೆಯಲ್ಲಿ ಹಿನ್ನೆಲೆ ಸಂಗೀತದೊಂದಿಗೆ ವ್ಯಕ್ತಿಯೊಬ್ಬ ‘ಚೀನಾ ಮಾರುಕಟ್ಟೆಯಲ್ಲಿ ಮ್ಯಾಜಿಕ್ ಟಿಶ್ಯೂ ಪೇಪರ್ ಸುಲಭವಾಗಿ ದೊರೆಯುತ್ತದೆ’ ಎಂದು ಹೇಳಿದ್ದ ಧ್ವನಿಯೊಂದಿಗೆ, ‘ಟಿಶ್ಯೂ ಪೇಪರ್‌ನಿಂದ ಮಾಡಿರುವ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ’ ಎಂದು ಹೇಳಿರುವಂತೆ ಎಡಿಟ್ ಮಾಡಿ ಜೋಡಿಸಲಾಗಿದೆ. ಈ ಹಿಂದೆ ಕೂಡ ನಕಲಿ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು.ಹಾಗಾಗಿ ಟಿಶ್ಯೂ ಪೇಪರ್ ಬಳಸಿ ಮಾತ್ರೆ ತಯಾರಿಸಲಾಗುತ್ತಿದೆ ಎಂದು ಹರಿದಾಡುತ್ತಿರುವ ವಿಡಿಯೋ ಸುಳ್ಳು.

[ವೈರಲ್ ಚೆಕ್ ಕಾಲಂ]

click me!