ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರ: ಅಮ್ಮನಿಗೆ ನಿನ್ನೆ ಏನಾಯ್ತು?

Published : Dec 05, 2016, 03:07 AM ISTUpdated : Apr 11, 2018, 01:01 PM IST
ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರ: ಅಮ್ಮನಿಗೆ ನಿನ್ನೆ ಏನಾಯ್ತು?

ಸಾರಾಂಶ

ಕೆಲ ದಿನಗಳ ಹಿಂದೆಯಷ್ಟೆ ಅಮ್ಮಾ ಆರೋಗ್ಯ ಚೇತರಿಕೆ ಕಂಡಿದೆ ಅಂತಾ ಎಐಡಿಎಂಕೆ ಪಕ್ಷದ ವರಿಷ್ಠರು ಸೇರಿ ಅಪೋಲೋ ಆಸ್ಪತ್ರೆ ಮುಖ್ಯಸ್ಥರು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದರು. ಆದರೂ ಅಮ್ಮಾ ಆರೋಗ್ಯದ ಬಗ್ಗೆ  ಕೆಲ ಗೊಂದಲಗಳೊಂದಿಗೆ ಅನುಮಾನಗಳು ತಳುಕುಹಾಕುತ್ತಿದ್ದವು. ಆದರೆ ಎಲ್ಲವೂ ಅಂದುಕೊಂಡಂತೆ ಅಮ್ಮಾ ಗುಣಮುಖ ಆಗುತ್ತಿದ್ದಾರೆ ಎನ್ನುವಷ್ಟರಲ್ಲೇ ಇಂದು ಸಂಜೆ ತಮಿಳಿಗರ ಪಾಲಿಗೆ ಬರ ಸಿಡಿಲೊಂದು ಬಂದೆರಗಿತ್ತು.

ಚೆನ್ನೈ(ಡಿ.05): ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ  ಚಿಕಿತ್ಸೆ ಪಡೆಯುತ್ತಿರುವ  ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಇನ್ನಷ್ಟು ಚಿಂತಾಜನಕವಾಗಿದೆ.

ತೀವ್ರ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಸೇರಿ ಬಹು ಅಂಗಾಗ ವೈಫಲ್ಯದಿಂದ ಸೆಪ್ಟೆಂಬರ್​ 22 ರಂದು ತಮಿಳುನಾಡು ಸಿಎಂ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅಂದಿನಿಂದಲೂ ಅಮ್ಮಾ ಸಾವು ಬದುಕಿನ ನಡುವೆ ತೀವ್ರ ಹೋರಾಟ ನಡೆಸಿದರು. ಅಮ್ಮಾ  ಆರೋಗ್ಯ ಚೇತರಿಕೆಗಾಗಿ ತಿಂಗಳಿನಿಂದಲೂ ಅಪೋಲೋ ಆಸ್ಪತ್ರೆ ವೈದ್ಯರು ಅವಿರತ ಪ್ರಯತ್ನ ನಡೆಸಿದ್ದರು.

ಆದರೆ ಚೆನ್ನೈ ಅಪೋಲೋ ಆಸ್ಪತ್ರೆ ವೈದ್ಯರ ಚಿಕಿತ್ಸೆ  ಅಮ್ಮನಿಗೆ ನೆರವಾಗಲಿಲ್ಲ. ಕೈ ಚೆಲ್ಲಿ ಕೂತಿದ್ದ ಅಪೋಲೋ ವೈದ್ಯರು ಅಮ್ಮನ ಚಿಕಿತ್ಸೆಗೆ ಲಂಡನ್​ ವೈದ್ಯರ ಮೊರೆ ಹೋಗಿದ್ದರು. ಲಂಡನ್ನಿನಿಂದ ಬಂದ ವೈದ್ಯರು ಜಯಲಲಿತಾಗೆ ಸೂಕ್ತ ಚಿಕಿತ್ಸೆ   ನೀಡಿದ್ರು. ಕೆಲ ದಿನಗಳ ಹಿಂದೆಯಷ್ಟೆ ಅಮ್ಮಾ ಆರೋಗ್ಯ ಚೇತರಿಕೆ ಕಂಡಿದೆ ಅಂತಾ ಎಐಡಿಎಂಕೆ ಪಕ್ಷದ ವರಿಷ್ಠರು ಸೇರಿ ಅಪೋಲೋ ಆಸ್ಪತ್ರೆ ಮುಖ್ಯಸ್ಥರು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದರು. ಆದರೂ ಅಮ್ಮಾ ಆರೋಗ್ಯದ ಬಗ್ಗೆ  ಕೆಲ ಗೊಂದಲಗಳೊಂದಿಗೆ ಅನುಮಾನಗಳು ತಳುಕುಹಾಕುತ್ತಿದ್ದವು. ಆದರೆ ಎಲ್ಲವೂ ಅಂದುಕೊಂಡಂತೆ ಅಮ್ಮಾ ಗುಣಮುಖ ಆಗುತ್ತಿದ್ದಾರೆ ಎನ್ನುವಷ್ಟರಲ್ಲೇ ಇಂದು ಸಂಜೆ ತಮಿಳಿಗರ ಪಾಲಿಗೆ ಬರ ಸಿಡಿಲೊಂದು ಬಂದೆರಗಿತ್ತು.

-ಸಂಜೆ - 5ಗಂಟೆ: ಜಯಲಲಿತಾಗೆ ಹೃದಯಾಘಾತ

ಸಂಜೆ 5 ಗಂಟೆಗೆ ಬರಸಿಡಿಲಿನಂತೆ ಎಲ್ಲಾ  ಮಾಧ್ಯಮಗಳ ಪರದೆ ಮೇಲೂ ಜಯಲಲಿತಾಗೆ ಹೃದಯಾಘಾತವಾಗಿರುವ  ಬ್ರೇಕಿಂಗ್  ಸುದ್ದಿ  ​ ಹರಿದಾಡಿತು.

-ಸಂಜೆ 6.30: ಮುಂಬೈನಲ್ಲಿದ್ದ ತಮಿಳುನಾಡು ರಾಜ್ಯಪಾಲರಿಗೆ ಮಾಹಿತಿ

-ಸಂಜೆ 7 ಗಂಟೆ: ಆಸ್ಪತ್ರೆ ಆವರಣದಲ್ಲೇ ತುರ್ತು ಸಭೆ ನಡೆಸಿದ ಸಚಿವರು, ಅಧಿಕಾರಿಗಳು

-ರಾತ್ರಿ 7.45: ಆಸ್ಪತ್ರೆಗೆ ಧಾವಿಸಿದ ಚೆನ್ನೈ ಪೊಲೀಸ್ ಮಹಾನಿರ್ದೇಶಕ

ಸಂಜೆ 6.30: ಮುಂಬೈನಲ್ಲಿದ್ದ ತಮಿಳುನಾಡು ರಾಜ್ಯಪಾಲರಿಗೆ ಮಾಹಿತಿ ನೀಡಲಾಯ್ತು. ಇತ್ತ ಸುದ್ದಿ ಕೇಳಿದ  ಸಚಿವರು, ಪಕ್ಷದ ಮುಖಂಡರುಗಳು ಆಸ್ಪತ್ರೆಗೆ ಜಮಾಯಿಸಿ ತುರ್ತು ಸಭೆ ನಡೆಸಿದರು. ಪರಿಸ್ಥಿತಿ ವಿಷಮವಾಗುವುದನ್ನು ಅರಿತ ಚೆನ್ನೈ ಪೊಲೀಸ್ ಮಹಾನಿರ್ದೇಶಕರು ಆಸ್ಪತ್ರೆಗೆ ಧಾವಿಸಿದರು.

-ರಾತ್ರಿ 8ಗಂಟೆ: ಜಯಲಲಿತಾ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ

ಟ್ವಿಟರ್​ ಮೂಲಕ ಸಾಲು ಸಾಲು ಟ್ವೀಟ್​: ರಾತ್ರಿ 8 ಗಂಟೆ ಹೊತ್ತಿಗೆ ಜಯಲಲಿತಾ ಆರೋಗ್ಯ ಚಿಂತಾಜನಕವಾಗಿರೋ ಬಗ್ಗೆ  ದೇಶಾದ್ಯಂತ ಸುದ್ದಿ  ಹರಿದಾಡುತ್ತಲೇ ರಾಷ್ಟ್ರ ನಾಯಕರು, ರಾಷ್ಟ್ರಪತಿಗಳು, ಸೇರಿದಂತೆ ಅಪೋಲೋ ಆಸ್ಪತ್ರೆ ಸಿಬ್ಬಂದಿಗಳು ಸಾಲು ಸಾಲು ಟ್ವೀಟ್​  ಮಾಡಿದರು.

-ಸಮಯ ರಾತ್ರಿ : 8.30: ತಜ್ಞ  ವೈದ್ಯರಿಂದ ಮುಂದುವರಿದ ಚಿಕಿತ್ಸೆ, ಆಸ್ಪತ್ರೆ ವೈದ್ಯರಿಂದ ಮಾಧ್ಯಮ ಪ್ರಕಟಣೆ

ರಾತ್ರಿ ಎಂಟೂವರೆ ಗಂಟೆ  ವೇಳೆಗೆ ​ತಜ್ಞ  ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿರೋ ಬಗ್ಗೆ  ಮಾಧ್ಯಮ ಪ್ರಕಟಣೆ ಬಿಡುಗಡಗೊಳಿಸಿದರು.

-ರಾತ್ರಿ 9.30: ಕೇಂದ್ರ ಗೃಹ ಸಚಿವರಿ​ಗೆ ದೂರವಾಣಿ ಮೂಲಕ ಮಾಹಿತಿ: ಹೆಚ್ಚುವರಿ ಸೇನಾ ತುಕಡಿ ರವಾನಿಸುವಂತೆ ಕೇಂದ್ರಕ್ಕೆ ಮನವಿ

ರಾತ್ರಿ ಒಂಬತ್ತೂವರೆ ಗಂಟೆಹೊತ್ತಿಗೆ ಪರಿಸ್ಥಿತಿ ಬಗ್ಗೆ  ಕೇಂದ್ರ ಗೃಹ ಸಚಿವ ರಾಜನಾಥ್​ಸಿಂಗ್​ ರಿ​ಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯ್ತು. ಹೆಚ್ಚುವರಿ ಸೇನಾ ತುಕಡಿ ರವಾನಿಸುವಂತೆ ಕೇಂದ್ರಕ್ಕೆ ತಮಿಳುನಾಡು ಸರ್ಕಾರ ಮನವಿ ಮಾಡಿಕೊಳ್ಳಲಾಯ್ತು. 

-ರಾತ್ರಿ 10 ಗಂಟೆ: ಚೆನ್ನೈ ಸಂಪರ್ಕಿಸುವ ಎಲ್ಲ ರಾಜ್ಯ/ ರಾಷ್ಟ್ರೀಯ ಹೆದ್ದಾರಿಗಳು ಬಂದ್​​, ಚೆನ್ನೈ ನಗರದಲ್ಲಿ  ಎಲ್ಲ ಕೇಬಲ್​ ಸಂಪರ್ಕಗಳು ಕಡಿತ

ರಾತ್ರಿ 10 ಗಂಟೆ ವೇಳೆಗೆ ಸಿಎಂ ಜಯಾಲಲಿತಾ ಕೊನೆಯುಸಿರೆಳೆದಿರುವ ಬಗ್ಗೆ ಗಾಳಿ ಸುದ್ದಿ ಹರಿದಾಡಿತು. ಕೂಡಲೇ ಚೆನ್ನೈ ಸಂಪರ್ಕಿಸುವ ಎಲ್ಲಾ  ರಾಜ್ಯ ರಾಷ್ಟ್ರೀಯಹೆದ್ದಾರಿಗಳನ್ನ ಬಂದ್​ ಮಾಡಲಾಯ್ತು. ಜತೆಗೆ  ಚೆನ್ನೈ ನಗರದಲ್ಲಿ  ಎಲ್ಲ ಕೇಬಲ್​ ಸಂಪರ್ಕಗಳನ್ನ ಕಡಿತಗೊಳಿಸಿ ಜನಸಾಗವನ್ನ ನಿಯಂತ್ರಿಸೋ ಕ್ರಮಕ್ಕೆ ಮುಂದಾದರು.

ಸದ್ಯ ಚೆನ್ನೈನಲ್ಲಿ ಎಲ್ಲಾ ಪೆಟ್ರೋಲ್​ ಬಂಕ್​ಗಳನ್ನ ಸ್ವಯಂಘೋಷಿತ ಬಂದ್ ಮಾಡಲಾಗಿದ್ದು, ​ಮಧ್ಯರಾತ್ರಿಯಿಂದಲೇ ತಮಿಳುನಾಡಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸೋಕೆ ಕೇಂದ್ರದ ನೆವು ಪಡೆದಿದ್ದು ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಚೆನ್ನೈನಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ