
ಮುಂಬೈ[ಜೂ. 17] ಹಿರಿಯ ದಂಪತಿಗೆ ಆಭರಣ ಮತ್ತು ಮೊಬೈಲ್ ಸೇರಿ 4.75 ಲಕ್ಷ ರೂ. ದರೋಡೆ ಮಾಡಿದ ಆರೋಪದಡಿ ಕುರ್ಲಾ ನಿವಾಸಿಯಾದ ಅಭಿಮನ್ಯು ಗುಪ್ತಾ ಎಂಬಾತನನ್ನು ಬಂಧಿಸಲಾಗಿದೆ.
ಜುಹು ನಿವಾಸಿಗಳಾದ ಹಿರಿಯ ದಂಪತಿ ತಮಗೆ ವಂಚನೆಯಾಗಿದೆ ಎಂದು ಜನವರಿ 19 ರಂದೇ ದೂರು ದಾಖಲಿಸಿದ್ದರು. ಟಿಕ್ ಟಾಕ್ ನಲ್ಲಿ ವಿಡಿಯೋ ನೋಡಿದ ಅಧಿಕಾರಿಯೊಬ್ಬರು ಆರೋಪಿಯನ್ನು ತಕ್ಷಣ ಪತ್ತೆ ಮಾಡಿದ್ದಾರೆ.
ಅಭಿಮನ್ಯು ಮೇಲೆ ಕಳ್ಳತನದ ನಾಲ್ಕು ಪ್ರಕರಣಗಳಿವೆ. ಸಿಸಿಟಿವಿ ದೃಶ್ಯ ಇದ್ದರೂ ಸ್ಪಷ್ಟವಾಗಿರಲಿಲ್ಲ. ಆದರೆ ಸಿಸಿಟಿವಿಯಲ್ಲಿ ಇರುವ ವ್ಯಕ್ತಿಯನ್ನೇ ಹೋಲುವವನು ಟಿಕ್ ಟಾಕ್ ನಲ್ಲಿ ಸದಾ ಆ್ಯಕ್ಟೀವ್ ಆಗಿರುವುದು ಗೊತ್ತಾದ ನಂತರ ಶಂಕಿತನನ್ನು ವಶಕ್ಕೆ ಪಡೆದುಕೊಂಡೆವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.