ವಿಮಾನ ಭೂಸ್ಪರ್ಷವನ್ನೇ ತಪ್ಪಿಸಿದ ಗಾಳಿ : ತಪ್ಪಿದ ಭಾರಿ ಅನಾಹುತ

By Web DeskFirst Published Oct 3, 2016, 3:36 PM IST
Highlights

ಬರ್ಮಿಂಗ್ ಹ್ಯಾಮ್(ಅ.3): ಬರ್ಮಿಂಗ್ ಹ್ಯಾಮ್'ನಲ್ಲಿ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಏರ್‌ಬಸ್ ಎ321 ವಿಮಾನ ಬರ್ಮಿಂಗ್ ಹ್ಯಾಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಬೇಕಿತ್ತು. ಪೈಲಟ್ ವಿಮಾನವನ್ನು ಕೆಳಗಿಳಿಸಲು ಮುಂದಾಗಿದ್ದ. ಆದರೆ ಗಾಳಿಯ ರಭಸಕ್ಕೆ ವಿಮಾನ ಅತ್ತಿತ್ತ ತೂಗಾಡಿದೆ. ಅದೆಷ್ಟು ಪ್ರಯತ್ನ ಪಟ್ಟರೂ ಲ್ಯಾಂಡಿಂಗ್ ಮಾಡಲು ಸಾಧ್ಯವೇ ಆಗಿಲ್ಲ. ಬಳಿಕ ಪೈಲಟ್ ವಿಮಾನವನ್ನು ಮತ್ತೆ ಮೇಲಕ್ಕೆ ಕೊಂಡೊಯ್ದಿದ್ದಾನೆ. ಕೆಲ ಕ್ಷಣಗಳ ಹಾರಾಟದ ಬಳಿಕ ಮತ್ತೊಮ್ಮೆ ವಿಮಾನ ಭೂಸ್ಪರ್ಷ ಮಾಡಲು ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ವಿಮಾನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿಲ್ಲ. ಎರಡನೇ ಬಾರಿ ಲ್ಯಾಂಡಿಂಗ್ ಮಾಡುವ ಪ್ರಯತ್ನದಲ್ಲಿ ಪೈಲಟ್ ಯಶಸ್ವಿಯಾಗಿದ್ದಾನೆ. ಈ ವಿಡಿಯೋ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.

click me!