ಕೆಂಪುಕೋಟೆಗೆ ಬರಲು BMW ಬದಲಿಗೆ ರೇಂಜ್ ರೋವರ್ ಬಳಸಿದ ಪ್ರಧಾನಿ ಮೋದಿ

Published : Aug 16, 2017, 12:15 PM ISTUpdated : Apr 11, 2018, 12:57 PM IST
ಕೆಂಪುಕೋಟೆಗೆ ಬರಲು BMW ಬದಲಿಗೆ ರೇಂಜ್ ರೋವರ್ ಬಳಸಿದ ಪ್ರಧಾನಿ ಮೋದಿ

ಸಾರಾಂಶ

71ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕೆಂಪು ಕೋಟೆಗೆ ಪ್ರಧಾನಿ ಮೋದಿಯವರು ಬಂದಿದ್ದು ಹೊಸ ಕಾರಿನಲ್ಲಿ. 2014ರಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತಾ ಕ್ರಮಗಳನ್ನು ಹೊಂದಿದ್ದ ಬಿಎಂಡಬ್ಲ್ಯೂ-7 ಸೀರಿಸ್ ಬಿಎಂಡಬ್ಲ್ಯೂ ಕಾರನ್ನೇ ಪ್ರಧಾನಿ ಮೋದಿ ಬಳಸುತ್ತಿದ್ದರು. ಆದರೆ ನಿನ್ನೆ ಹೊಸ ಕಾರಿನಲ್ಲಿ ಬಂದದ್ದು ಅಚ್ಚರಿದಾಯಕವಾಗಿತ್ತು.

ನವದೆಹಲಿ: 71ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕೆಂಪು ಕೋಟೆಗೆ ಪ್ರಧಾನಿ ಮೋದಿಯವರು ಬಂದಿದ್ದು ಹೊಸ ಕಾರಿನಲ್ಲಿ.

2014ರಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತಾ ಕ್ರಮಗಳನ್ನು ಹೊಂದಿದ್ದ ಬಿಎಂಡಬ್ಲ್ಯೂ-7 ಸೀರಿಸ್ ಬಿಎಂಡಬ್ಲ್ಯೂ ಕಾರನ್ನೇ ಪ್ರಧಾನಿ ಮೋದಿ ಬಳಸುತ್ತಿದ್ದರು. ಆದರೆ ನಿನ್ನೆ ಹೊಸ ಕಾರಿನಲ್ಲಿ ಬಂದದ್ದು ಅಚ್ಚರಿದಾಯಕವಾಗಿತ್ತು.

ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಐಶಾರಾಮಿ ಎಸ್’ಯುವಿಯನ್ನು ಬಳಸಿದ್ದಾರೆ. ಅವರು ಈಗ ನೆಚ್ಚಿಕೊಂಡಿರುವ ಕಾರು ರೇಂಜ್ ರೋವರ್ ಕಂಪನಿಯದ್ದು. ಆದರೆ ಅದರ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

ಭಾಷಣ ಮುಗಿಸಿದ ಬಳಿಕ ಪ್ರಧಾನಿ ರೇಂಜ್ ರೋವರ್ ಕಾರಿನ ಮುಂಭಾಗದ ಸೀಟಿನಲ್ಲಿ ಕೂತುಕೊಂಡಿದ್ದರು. ಸ್ವಪಲ್ಪ ಮುಂದೆ ಚಲಿಸಿದ ಬಳಿಕ ಕೃಷ್ಣ ವೇಷಧಾರಿ ಮಕ್ಕಳನ್ನು ಕಂಡು ಕಾರನ್ನು ನಿಲ್ಲಿಸಿ ಅವರೊಂದಿಗೆ ಫೋಟೋ ಕೂಡಾ ಕ್ಲಿಕ್ಕಿಸಿದರು.

ಪ್ರಧಾನಿಯ ಬಳಕೆಗೆ ಬೇರೆ ಬೇರೆ ಕಂಪನಿಯ ಬಹಳಾರು ಗುಂಡು-ನಿರೋಧಕ ಕಾರುಗಳನ್ನು ವಿಶೇಷ ರಕ್ಷಣಾ ದಳ (Special Protection Group - SPG) ಹೊಂದಿದೆ. ಪ್ರಧಾನಿ ಯಾವ ಕಾರನ್ನು ಬಳಸಬೇಕು ಎಸ್’ಪಿಜಿ ನಿರ್ಧರಿಸುತ್ತದೆ.

ಪ್ರಧಾನಿ ಹೊರತು  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್’ರಿಗೆ ಎಸ್’ಪಿಜಿ ರಕ್ಷಣೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!
ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ಭಾವುಕರಾದ್ ಸುಜೀತ್