ಅಬ್ಬಾ! ರಾತ್ರಿ 10 ಗಂಟೆ ಬಳಿಕ ಪಟಾಕಿ ಸಿಡಿಸಿದ್ರೆ ಸಿಗುವ ಶಿಕ್ಷೆ ಇದು!

By nikhil vkFirst Published Nov 8, 2018, 2:21 PM IST
Highlights

ಈ ಬಾರಿಯ ದೀಪಾವಳಿಯಂದು ನೀವು 10 ಗಂಟೆ ಬಳಿಕ ಪಟಾಕಿ ಸಿಡಿಸಿದರೆ ಮುಂದಿನ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿವರೆಗೆ ದಂಡ ಇಲ್ಲವೇ ಇವೆರಡೂ ಶಿಕ್ಷೆ ಸಿಗಲಿದೆ. 

ನವದೆಹಲಿ[ನ.11]: ಈ ಬಾರಿಯ ದೀಪಾವಳಿಗೆ ನೀವು 10 ಗಂಟೆ ಬಳಿಕ ಪಟಾಕಿ ಸಿಡಿಸಿದರೆ ಮುಂದಿನ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿವರೆಗೆ ದಂಡ ಇಲ್ಲವೇ ಇವೆರಡೂ ಶಿಕ್ಷೆ ಸಿಗಲಿದೆ. ರಾತ್ರಿ 10 ಗಂಟೆ ಬಳಿಕ ಪಟಾಕಿ ಸಿಡಿಸದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದರೂ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಜನರು ಪಟಾಕಿ ಸಿಡಿಸಿದ್ದಾರೆ. ಈ ಮೂಲಕ ಮಾಲಿನ್ಯದಿಂದ ಕಂಗೆಟ್ಟಿರುವ ದೆಹಲಿಯ ಗಾಳಿ ಮತ್ತಷ್ಟು ವಿಷಪೂರಿತಗೊಂಡಿದೆ.

ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ 'ಪಟಾಕಿ ಸಿಡಿಸುವುದರ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ[ಸರ್ಕಾರಿ ಆದೇಶ ಪಾಲಿಸದಿರುವುದು] ಪ್ರಕರಣ ದಾಖಲಾಗಬಹುದು. ಹೀಗಿದ್ದರೂ ಠಾಣೆಯಿಂದಲೇ ಜಾಮೀನು ಸಿಗುವ ಸಾಧ್ಯತೆಗಳಿವೆ' ಎಂದಿದ್ದಾರೆ.

ಇತ್ತ ಅಡ್ವಕೇಟ್ ಸುರೇಂದ್ರ ಸಿಂಗ್ ಭಾಟಿ ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ 'ಈ ಆದೇಶ ಉಲ್ಲಂಘಿಸಿದರೆ ಮೆಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತದೆ. ಆರೋಪ ಸಾಬೀತಾದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿ ದಂಡ ಇಲ್ಲವೇ ಇವೆರಡೂ ಸಿಗುವ ಸಾಧ್ಯತೆಗಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಗುವ ಸಾಧ್ಯತೆಗಳಿದ್ದರೂ ಇದು ರಾಜಿ ಮಾಡಿಕೊಳ್ಳಲು ಅಸಾಧ್ಯವಾದ ವಿಚಾರ' ಎಂದಿದ್ದಾರೆ.

ಈವರೆಗೂ ನೊಯ್ಡಾದಲ್ಲಿ ಒಟ್ಟು 31 ಮಂದಿಯನ್ನು ಕೋರ್ಟ್ ಆದೇಶ ಪಾಲಿಸದಿರುವ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಎಲ್ಲರಿಗೂ ಈಗಾಗಲೇ ಜಾಮೀನು ಕೂಡಾ ನೀಡಲಾಗಿದೆ. ಹೀಗಿದ್ದರೂ ಅವರೆಲ್ಲರನ್ನೂ ರಾತ್ರಿ 10 ಗಂಟೆ ಬಳಿಕ ಪಟಾಕಿ ಸಿಡಿಸುತ್ತಿದ್ದರೆಂಬ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಪೂರ್ವ ದೆಹಲಿಯಲ್ಲಿ ಒಟ್ಟು 40 ಮಂದಿಯನ್ನು ಬಂಧಿಸಿದ್ದಾರೆಂಬ ವಿಚಾರವೂ ಬೆಳಕಿಗೆ ಬಂದಿದೆ.

ಸುಪ್ರೀಂ ಕೋರ್ಟ್ 'ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಶಬ್ಧ ಮಾಡುವ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. 
 

click me!