ಮುಂದಿನ ವರ್ಷದಿಂದ ಇಂತಹ ಆಟೋಗಳ ಸಂಚಾರಕ್ಕೆ ನಿಷೇಧ

Published : Dec 27, 2017, 09:29 AM ISTUpdated : Apr 11, 2018, 12:47 PM IST
ಮುಂದಿನ ವರ್ಷದಿಂದ ಇಂತಹ ಆಟೋಗಳ ಸಂಚಾರಕ್ಕೆ ನಿಷೇಧ

ಸಾರಾಂಶ

ರಾಜ್ಯ ಸರ್ಕಾರ ಹೊಸ ವರ್ಷದ ಏಪ್ರಿಲ್ 1 ರ ಬಳಿಕ ಬೆಂಗಳೂರ ನಗರದಲ್ಲಿ 2 ಸ್ಟ್ರೋಕ್ ಆಟೋ ಸಂಚಾರ ನಿಷೇಧಿಸಿರುವುದರಿಂದ, ಏಪ್ರಿಲ್ ನಂತರ ನಗರದಲ್ಲಿ ಸಂಚರಿಸುವ 2 ಸ್ಟ್ರೋಕ್ ಆಟೋಗಳನ್ನು ಜಪ್ತಿ ಮಾಡುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರು (ಡಿ.27): ರಾಜ್ಯ ಸರ್ಕಾರ ಹೊಸ ವರ್ಷದ ಏಪ್ರಿಲ್ 1 ರ ಬಳಿಕ ಬೆಂಗಳೂರ ನಗರದಲ್ಲಿ 2 ಸ್ಟ್ರೋಕ್ ಆಟೋ ಸಂಚಾರ ನಿಷೇಧಿಸಿರುವುದರಿಂದ, ಏಪ್ರಿಲ್ ನಂತರ ನಗರದಲ್ಲಿ ಸಂಚರಿಸುವ 2 ಸ್ಟ್ರೋಕ್ ಆಟೋಗಳನ್ನು ಜಪ್ತಿ ಮಾಡುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಶಾಂತಿನಗರದ ಸಾರಿಗೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 2 ಸ್ಟ್ರೋಕ್ ಆಟೋಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಹಾಗಾಗಿ ನಗರದಲ್ಲಿರುವ 2 ಸ್ಟ್ರೋಕ್ ಆಟೋಗಳನ್ನು ಮುಂದಿನ ಏಪ್ರಿಲ್ 1ರೊಳಗೆ ಹೊರ ಜಿಲ್ಲೆಗಳಿಗೆ ಮಾರಾಟ ಮಾಡಬೇಕು.

ಈಗಾಗಲೇ ನೆಲಮಂಗಲ ಮತ್ತು ರಾಜಾಜಿನಗರದಲ್ಲಿ ಸ್ಕ್ರ್ಯಾಪ್ ಘಟಕ ಆರಂಭಿಸಲಾಗಿದೆ. ಒಂದು ವೇಳೆ ಏಪ್ರಿಲ್ ನಂತರವೂ ನಗರದಲ್ಲಿ 2 ಸ್ಟ್ರೋಕ್ ಆಟೋಗಳು ಸಂಚರಿಸುವುದು ಕಂಡು ಬಂದಲ್ಲಿ ಸಾರಿಗೆ ಇಲಾಖೆ ಅವುಗಳನ್ನು ಜಪ್ತಿ ಮಾಡಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ 4 ಸ್ಟ್ರೋಕ್ ಆಟೋ ಖರೀದಿಗೆ ತಲಾ 30 ಸಾವಿರ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಈ ಸಹಾಯಧನ ಪಡೆಯಬೇಕಾದರೆ ಸಾರಿಗೆ ಇಲಾಖೆ ಅನುಮತಿ ನೀಡಿರುವ ಸ್ಕ್ರ್ಯಾಪ್ ಸೆಂಟರ್‌ಗಳಲ್ಲಿ 2 ಸ್ಟ್ರೋಕ್ ಆಟೋಗಳನ್ನು ಸ್ಕ್ರ್ಯಾಪ್ ಮಾಡಬೇಕು. ಬಳಿಕ ಈ ಕೇಂದ್ರಗಳಲ್ಲಿ ನೀಡುವ ಅಧಿಕೃತ ಪ್ರಮಾಣ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದರು. 

ಇ-ಪರ್ಮಿಟ್‌ಗೆ ಆಧಾರ್ ಕಡ್ಡಾಯ: ನಗರದಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವ ಆಟೋಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇ-ಪರ್ಮಿಟ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಪರವಾನಗಿ ಪಡೆದಿರುವ ಆಟೋ ಮಾಲೀಕರು ತಮ್ಮ ಹಳೆಯ ಪರವಾನಗಿ ಜೊತೆಗೆ ಆಧಾರ್ ಗುರುತಿನ ಚೀಟಿಯನ್ನು ಸಾರಿಗೆ ಇಲಾಖೆಗೆ ಒದಗಿಸಬೇಕು. ಈ ದಾಖಲೆಗಳ ಪರಿಶೀಲನೆ ಬಳಿಕ ನಕಲಿಗೆ ಸಾಧ್ಯವಾಗದಂತಾ ಇ-ಪರ್ಮಿಟ್ ನೀಡಲಾಗುವುದು. ಈ ಸಂಬಂಧ ಇಲಾಖೆ ಅಂತಿಮ ತಯಾರಿ ನಡೆಸಿದ್ದು, ಶೀಘ್ರದಲ್ಲೇ ಇ-ಪರ್ಮಿಟ್ ವಿತರಣೆಗೆ ಚಾಲನೆ ನೀಡುವುದಾಗಿ ಹೇಳಿದರು.

120 ಕೇಂದ್ರಗಳ ವಿರುದ್ಧ ಕ್ರಮ: ಬೆಂಗಳೂರು ನಗರದಲ್ಲಿ ಸುಮಾರು 700 ವಾಹನ ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸುಮಾರು 120  ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಈ ಕೇಂದ್ರಗಳನ್ನು ಉನ್ನತೀಕರಿಸಲು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು: ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!