ಇಂದಿನಿಂದ ಈ ವಾಹನಗಳಿಗೆ ಹೊಸ ನಿಯಮ

By Web DeskFirst Published Sep 1, 2018, 12:07 PM IST
Highlights

ಈ ವಾಹನಗಳಿಗೆ ಇನ್ನುಮುಂದೆ ಹೊಸ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಕಾರು ಹಾಗೂ ಬೈಕ್ ಗಳನ್ನು ಕೊಳ್ಳಲು ಥರ್ಡ್ ಪಾರ್ಟಿ ವಿಮೆ ಮಾಡಿಸುದನ್ನು ಶನಿವಾರದಿಂದ ಕಡ್ಡಾಯ ಮಾಡಲಾಗಿದೆ. 

ನವದೆಹಲಿ: ಹೊಸ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಥರ್ಡ್‌ ಪಾರ್ಟಿ ವಿಮೆ ಸೌಲಭ್ಯ ಕಡ್ಡಾಯಗೊಳಿಸುವ ನಿಯಮ ಶನಿವಾರ(ಸೆ.1ರಿಂದ)ದಿಂದಲೇ ಜಾರಿಗೆ ಬರಲಿದೆ.

ಈ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಡ್ಡಿ ಮುರಿದಂತೆ ಹೇಳಿದೆ. ಇದರ ಪ್ರಕಾರ ನೂತನ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ಕಾರುಗಳಿಗೆ 3 ವರ್ಷದ ಥರ್ಡ್‌ ಪಾರ್ಟಿ ವಿಮೆಯನ್ನು ನೀಡಬೇಕಿದೆ.

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಅವರ ಪೀಠ, ಥರ್ಡ್‌ ಪಾರ್ಟಿ ವಿಮೆ ಜಾರಿಯ ಕಾಲಾವಧಿ ವಿಸ್ತರಣೆ ಮಾಡಬೇಕೆಂದು ಕೋರಿದ ಜನರಲ್‌ ಇನ್ಶೂರೆನ್ಸ್‌ ಕೌನ್ಸಿಲ್‌ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು.

click me!