2000 ರು.ವರೆಗಿನ ಡೆಬಿಟ್‌ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ

By Suvarna Web DeskFirst Published Jan 2, 2018, 9:12 AM IST
Highlights

- 2 ಸಾವಿರದವರೆಗಿನ ವ್ಯವಹಾರಕ್ಕಿಲ್ಲ ಶುಲ್ಕ

- ನಗದು ರಹಿತ ವ್ಯವಹಾರಕ್ಕೆ ಒತ್ತು.

ನವದೆಹಲಿ: 2000 ರು.ವರೆಗಿನ ಡೆಬಿಟ್ ಕಾರ್ಡ್, ಭೀಮ್ ಆ್ಯಪ್ ಮತ್ತು ಇತರ ಪಾವತಿಗೆ ವಹಿವಾಟು ಶುಲ್ಕವನ್ನು ಹಿಂಪಡೆದುಕೊಳ್ಳಲಾಗಿದೆ. 2000 ರು. ವರೆಗಿನ ವಹಿವಾಟಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ನು ಸರ್ಕಾರವೇ ಭರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 

Happy Digital 2018. Dec Qtr BHIM txn rise 86% to 145.6 M with value of 13174 Cr. Further impetus to Digital Payments, Govt 2 reimburse charges for txns upto Rs 2000 on debit cards/ BHIM. Zero charges on merchants. Go Digital, Embrace Transparency pic.twitter.com/5ai3G0IoTD

— Rajeev kumar (@rajeevkumr)

ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಭೀಮ್ ಆ್ಯಪ್ ಮೂಲಕ ನಡೆಸಿದ ವಹಿವಾಟು 13,174 ಕೋಟಿ ರು. ತಲುಪಿದೆ. 2000 ರು. ವರೆಗಿನ ಡೆಬಿಟ್ ಕಾರ್ಡ್ ವಹಿವಾಟಿ ಶುಲ್ಕವನ್ನು ಸರ್ಕಾರವೇ ಮರುಪಾವತಿ ಮಾಡಲಿದೆ ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ. 
 

click me!