
ಉಡುಪಿಯ ಕೃಷ್ಣಮಠದ ಆವರಣ ಅಪರೂಪ ಸಮಾಗಮವೊಂದಕ್ಕೆ ಸಾಕ್ಷಿಯಾಗಿದೆ. ಎರಡು ಪ್ರಸಿದ್ಧ ಸಂಸ್ಥಾನದ ಯತಿಗಳು ಶತಮಾನಗಳ ಮುನಿಸು ಮರೆತು ಮುಖಾಮುಖಿಯಾಗುತ್ತಿದ್ದು ಕೃಷ್ಣಮಠದಲ್ಲಿ ವಿಶೇಷ ಪೂಜೆ ಶುರುವಾಗಿದೆ. ಉಡುಪಿಯ ಅನಂತೇಶ್ವರ ಸನ್ನಿಧಿಯಲ್ಲಿ ಎರಡೂ ಮಠಾಧೀಶರು ಮುಖಾಮುಖಿಯಾಗಿದ್ದು 250 ವರ್ಷಗಳ ಬಳಿಕ ಅಪರೂಪ ಸಮಾಗಮ ನಡೆದಿದೆ. ಪೇಜಾವರ ಶ್ರೀಗಳ ಸಮ್ಮುಖದಲ್ಲಿ ರಥಬೀದಿಯಲ್ಲಿ ಮೆರವಣಿಗೆ ಮಾಡಿ ಎರಡೂ ಮಠಗಳ ಶ್ರೀಗಳನ್ನು ಸ್ವಾಗತಿಸಲಾಯ್ತು.. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮಠದ ಯತಿಗಳ ನಡುವೆ ಶತಮಾನಗಳ ಹಿಂದೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮುಂದುವರೆದಿತ್ತು. 18 ನೇ ಶತಮಾನದಲ್ಲಿ ಸೋದೆ ಮಠ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಉಡುಪಿ ಮೂಲದ ಸಹೋದರರು ಪೀಠಾಧಿಪತಿಗಳಾಗಿದ್ದರು. ಒಮ್ಮೆ ಸೋದೆ ಮಠಾಧೀಶರನ್ನು ಕಾಯದೇ ಸುಬ್ರಹ್ಮಣ್ಯ ಮಠಾಧೀಶರು ಪೂಜೆ ನೆರವೇರಿಸಿದ್ದರು ಎಂಬ ಕಾರಣಕ್ಕೆ ಎರಡೂ ಮಠಗಳ ಯತಿಗಳ ನಡುವೆ ವೈಮನಸ್ಸು ಉಂಟಾಗಿ ಸಂಬಂಧವೇ ಕಡಿದುಹೋಗಿತ್ತು. ಅಂದಿನಿಂದ ನಾಲ್ಕಾರು ತಲೆಮಾರು ಕಳೆದ್ರೂ ಎರಡೂ ಮಠದ ಸ್ವಾಮೀಜಿಗಳು ಪರಸ್ಪರ ಮುಖದರ್ಶನ ಮಾಡುತ್ತಿರಲಿಲ್ಲ. ಇದೀಗ ಶತಮಾನಗಳ ಭಿನ್ನಮತ ಶಮನಕ್ಕೆ ಕಾಲ ಕೂಡಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.