ಇಮ್ರಾನ್ ಗೆ ದಾಳಿಯ ಎಚ್ಚರಿಕೆ ನೀಡಿದ್ದ SKIN DOCTOR ಯಾರು?

Published : Feb 27, 2019, 05:38 PM IST
ಇಮ್ರಾನ್ ಗೆ ದಾಳಿಯ ಎಚ್ಚರಿಕೆ ನೀಡಿದ್ದ SKIN DOCTOR ಯಾರು?

ಸಾರಾಂಶ

ಭಾರತೀಯ ವಾಯುಸೇನೆಯ ದಾಳಿಯ ಕುರಿತು ಇಮ್ರಾನ್ ಖಾನ್ ಗೆ ಮಾಹಿತಿ ನೀಡಿದ್ಯಾರು?| ಇಮ್ರಾನ್ ಗೆ ಟ್ವೀಟ್ ಮಾಡಿದ್ದ ಸ್ಕಿನ್ ಡಾಕ್ಟರ್ ಯಾರು?| ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಫಾಲೋ ಮಾಡುವ ಸ್ಕಿನ್ ಡಾಕ್ಟರ್ ಯಾರು?| ದಾಳಿಗೂ ಮೊದಲೇ ಇಮ್ರಾನ್ ಗೆ ಎಚ್ಚರಿಕೆ ನೀಡಿದ್ದ ಸ್ಕಿನ್ ಡಾಕ್ಟರ್|

ಇಸ್ಲಾಮಾಬಾದ್(ಫೆ.27): ಪಾಪ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಪಾಡಿಗೆ ದೇಶದ ಆರ್ಥಿಕ ವ್ಯವಸ್ಥೆ ಕುರಿತು ಚಿಂತನೆ ನಡೆಸುತ್ತಿದ್ದರೆ, ಸ್ಕಿನ್ ಡಾಕ್ಟರ್ ಎಂಬ ನಿಗೂಢ ವ್ಯಕ್ತಿ ಭಾರತೀಯ ವಾಯುಪಡೆಯ ದಾಳಿಯ ಎಚ್ಚರಿಕೆ ನೀಡಿ ಬೆಚ್ಚಿ ಬಿಳಿಸಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಇಮ್ರಾನ್ ಖಾನ್ ಅಧಿಕೃತ ಟ್ವಿಟ್ಟರ್ ಗೆ ಸ್ಕಿನ್ ಡಾಕ್ಟರ್ ಎಂಬ ನಿಗೂಢ ವ್ಯಕ್ತಿ ಟ್ವೀಟ್ ಮಾಡಿದ್ದು, ಇಂದು ರಾತ್ರಿ ಪಾಕ್ ನೆಲದಲ್ಲಿ ಭಾರತೀಯ ವಾಯುಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಲಿದೆ ಎಂದು ಎಚ್ಚರಿಸಿದ್ದ.

ಇನ್ನೂ ವಿಚಿತ್ರ ಸಂಗತಿ ಎಂದರೆ ಈ ಸ್ಕಿನ್ ಡಾಕ್ಟರ್ ಟ್ವಿಟ್ಟರ್ ಪ್ರೊಫೈಲ್ ನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ಕಾಂಗ್ರೆಸ್ ನಾಯಕ ಸಂಜಯ್ ನಿರೂಪಮ್ ಹಗೂ ಗೌರವ್ ಭಾಟಿಯಾ ಕೂಡ ಫಾಲೋ ಮಾಡುತ್ತಾರೆ.

ಯರು ಈ ಸ್ಕಿನ್ ಡಾಕ್ಟರ್?:

ಸ್ಕಿನ್ ಡಾಕ್ಟರ್ ಎಂಬ ಪ್ರೊಫೈಲ್ ಹೊಂದಿರುವ ವ್ಯಕ್ತಿ ನಿಜ ಜೀವನದಲ್ಲೂ ಚರ್ಮ ತಜ್ಞನಾಗಿದ್ದು, ಸೇನೆಯಲ್ಲಿ ವೈದ್ಯನಗಿ ಸೇವೆ ಕೂಡ ಸಲ್ಲಿಸಿದ್ದಾನೆ ಎನ್ನಲಾಗಿದೆ. ಈತ ತನ್ನ ಹೆಸರು ವಿಶ್ಸಿ ಸಿಂಗ್ ಎಂದು ಹೇಳಿಕೊಂಡಿದ್ದಾನೆ.

ಆದರೆ ಈತ ಯಾಕೆ ಭಾರತದ ವಾಯುದಾಳಿಯ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ಕುರಿತು ಖುದ್ದು ಸ್ಪಷ್ಟನೆ ನೀಡಿರುವ ಸ್ಕಿನ್ ಡಾಕ್ಟರ್, ಪುಲ್ವಾಮಾ ದಾಳಿಯ ಬಳಿಕ ನಿತ್ಯವೂ ಇಮ್ರಾನ್ ಖಾನ್ ಗೆ ಇಮತಹ ಸಂದೇಶ ಕಳುಹಿಸುತ್ತಿದ್ದು, ಅದರಂತೆ ದಾಳಿಗೂ ಮುನ್ನಾ ದಿನ ಕೂಡ ಕಳುಹಿಸಿದ್ದಾಗಿ ತಿಳಿಸಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್