
ಬೀದರ್(ಅ.24): ಹೈದರಾಬಾದ್ ಕರ್ನಾಟಕ ಭಾಗದ ಜನರ ದಶಕದ ಕನಸು ನನಸಾಗೋಕೆ ದಿನಗಣನೆ ಶುರುವಾಗಿದೆ. ಕಲಬುರಗಿ ಹಾಗೂ ಬೀದರ್ ನಡುವಿನ ರೈಲ್ವೆ ಸಂಚಾರಕ್ಕೆ ಇದೇ 29ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೀದರ್-ಕಲಬುರಗಿ ರೈಲು ಮಾರ್ಗ ಹೈದರಾಬಾದ್ ಕರ್ನಾಟಕ ಭಾಗದ ಮಹತ್ವದ ಯೋಜನೆ. ಬರೋಬ್ಬರಿ 110 ಕಿ.ಮೀ ಮಾರ್ಗದ ಈ ಯೋಜನೆ 1999ರಿಂದ ನೆನೆಗುದಿಗೆ ಬಿದ್ದಿತ್ತು..ಈದೀಗ ಪೂರ್ಣಗೊಂಡಿದೆ. ಬೀದರ್ನಿಂದ ಕಲಬುರಗಿವರೆಗಿನ ಈ ಮಾರ್ಗದಲ್ಲಿ 13 ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಬೀದರ್ ನಿಂದ ಹುಮನಾಬಾದ್ ವರೆಗೆ ಸಂಚಾರ ಮುಕ್ತವಾಗಿದ್ದು ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ. ಕಮಲಾಪುರದಿಂದ ಕಲಬುರಗಿವರೆಗೆ ಬಾಕಿಯಿದ್ದ ಕಾಮಗಾರಿಯೂ ಈಗ ಪೂರ್ಣಗೊಂಡಿದೆ.
ಒಟ್ಟಿನಲ್ಲಿ ಇದೇ 29ರಂದು ಹೈ-ಕ ಭಾಗದ ಕನಸಿನ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದು.. ಈ ಮಾರ್ಗ ಉದ್ಘಾಟನೆಯಿಂದ ದೆಹಲಿ ಪ್ರಯಾಣಿಕರಿಗೆ 7 ಗಂಟೆ ಉಳಿತಾಯವಾದರೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.