ಲೋಕಾ ಗೆಲುವಿಗಾಗಿ ಬಿಜೆಪಿ ಮಾಸ್ಟರ್ ಪ್ಲಾನ್ ಸೂಪರ್ !

By Web DeskFirst Published Sep 8, 2018, 9:53 PM IST
Highlights

ಇನ್ನೂ ವಿಪಕ್ಷಗಳ ಬಹುದೊಡ್ಡ ಅಸ್ತ್ರವಾಗಿರೋ ತೈಲ ಬೆಲೆ ಏರಿಕೆ ವಿಚಾರದ ಬಗ್ಗೆ ಪಕ್ಷದ ನಿಲುವನ್ನ ಸ್ಪಷ್ಟ ಪಡಿಸುವುದು, ಹಾಗೇನೆ ಮುಂದಿನ ಚುನಾವಣೆಯಲ್ಲಿ ದಲಿತರಿಗೆ  ಆದ್ಯತೆ ನೀಡುವ ಬಗ್ಗೆ  ಪ್ಲಾನ್ ರೂಪಿಸಲಾಗಿದೆ.

ನವದೆಹಲಿ[ಸೆ.08]: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಸದ್ದಿಲ್ಲದೇ ಮುಂದಿನ ಲೋಕಸಭೆ ಚುನಾವಣೆ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ಹೆಣೆಯುತ್ತಿದೆ.

ರಾಷ್ಟ್ರರಾಜಧಾನಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ  ನಡೆದಿದ್ದು, 5 ರಾಜ್ಯಗಳ ವಿಧಾನಸಭೆ ಚುನಾವಣೆ ಜೊತೆಗೆ ಲೋಕಸಭೆ ಚುನಾವಣೆ ಗೆಲುವಿನ ತಂತ್ರ ರೂಪಿಸುತ್ತಿದೆ. ವರ್ಷಾಂತ್ಯದ ವೇಳೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ. ಮುಂದಿನ ವರ್ಷ ಲೋಕಸಭೆ ಎಲೆಕ್ಷನ್. ಈ ಎಲ್ಲಾ ಚುನಾವಣೆಗಳನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಮೋದಿ ಪಾಳಯ ಕಟ್ಟಿ ಹಾಕಲು ವಿರೋಧಿ ಪಾಳಯ ತಂತ್ರ ಹೂಡಿದೆ. ಇನ್ನೊಂದೆಡೆ ಮಹಾಘಟಬಂಧನ ತಡೆದು ಮತ್ತೊಮ್ಮೆ ಸೋಲಿನ ರುಚಿ ತೋರಿಸಲು ಸದ್ದಿಲ್ಲದೇ ವಾರ್ ರೂಮಿನಲ್ಲಿ ಬಿಜೆಪಿ ಪ್ರತಿತಂತ್ರ ಸಿದ್ಧಗೊಳ್ಳುತ್ತಿದೆ. ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಿದೆ. 

ಮತ್ತೊಂದು ದಿಗ್ವಿಜಯಕ್ಕಾಗಿ ‘ಬಿಜೆಪಿ ಅಜೇಯ’ ಘೋಷಣೆ 
ಕಳೆದ ಬಾರಿಯ ಲೋಕಸಭೆ ಚುನಾವಣೆ ಘೋಷಣೆ ವೇಳೆ ಬಿಜೆಪಿ ಪಕ್ಷ ಅಬ್ ಕಿ ಬಾರ್ ಮೋದಿ ಸರ್ಕಾರ್ ಅಂತಾ ಘೋಷಣೆಯಿಂದಲೇ ಗಮನ ಸೆಳೆದಿತ್ತು.ಈ ಬಾರಿಯೂ ಬಿಜೆಪಿ ಮತ್ತೊಂದು ದಿಗ್ವಿಜಯಕ್ಕಾಗಿ ‘ಬಿಜೆಪಿ ಅಜೇಯ’ ಘೋಷ ವಾಕ್ಯದೊಂದಿಗೆ ಚುನಾವಣೆಗೆ ಸಜ್ಜಾಗಿದೆ. ಮೊದಿ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಮನವರಿಕೆ ಮಾಡುವುದು.ಇನ್ನೂ ವಿಪಕ್ಷಗಳ ಬಹುದೊಡ್ಡ ಅಸ್ತ್ರವಾಗಿರೋ ತೈಲ ಬೆಲೆ ಏರಿಕೆ ವಿಚಾರದ ಬಗ್ಗೆ ಪಕ್ಷದ ನಿಲುವನ್ನ ಸ್ಪಷ್ಟ ಪಡಿಸುವುದು, ಹಾಗೇನೆ ಮುಂದಿನ ಚುನಾವಣೆಯಲ್ಲಿ ದಲಿತರಿಗೆ  ಆದ್ಯತೆ ನೀಡುವ ಬಗ್ಗೆ  ಪ್ಲಾನ್ ರೂಪಿಸಲಾಗಿದೆ.

ಸಿನಿ ತಾರೆಯರನ್ನು ಸೆಳೆದ ಬಿಜೆಪಿ 
ಇನ್ನೂ ದಕ್ಷಿಣಭಾರತದಲ್ಲಿ ಬಿಜೆಪಿ ಬಲಪಡಿಸಲು ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಮೋಹನ್ ಲಾಲ್ ರನ್ನು ಪಕ್ಷಕ್ಕೆ ಕರೆ ತರುವ ಕುರಿತು ಚರ್ಚೆ ನಡೆದಿದೆ. ಈ ಮಧ್ಯೆ ತೆಲಂಗಾಣದಲ್ಲೂ ಅಧಿಕಾರ ಹಿಡಿಯಲು ಚಿಂತನೆ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷರು, ಸೆಪ್ಟೆಂಬರ್ 15 ರಿಂದ ತೆಲಂಗಾಣ ಪ್ರವಾಸ  ಕೈಗೊಂಡಟಿದ್ದಾರೆ. ಈ ಮಧ್ಯೆ ಶಾ ಅಧ್ಯಕ್ಷರಾದ ಮೇಲೆ ಬಿಜೆಪಿಯ ಗೆಲುವಿನ ಯಾತ್ರೆ ಮುಂದುವರಿದಿದ್ದು, ಹೀಗಾಗಿ ಅಮಿತ್ ಶಾ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

click me!