
ವಾಷಿಂಗ್ಟನ್: ಇರಾನ್‌ನ ಫೊರ್ಡೋ ಸೇರಿದಂತೆ 3 ಅಣು ಕ್ರೇಂದ್ರಗಳ ಮೇಲಿನ ದಾಳಿಗೆ ಅಮೆರಿಕದಿಂದ ಹೊರಟಿದ್ದ ಬಿ-2 ಸ್ಟೆಲ್ತ್ ಬಾಂಬರ್‌ಗಳಲ್ಲಿ, ಆಹಾರ, ಆರಾಮದಿಂದ ಹಿಡಿದು ಶೌಚದವರೆಗೆ ಪೈಲಟ್‌ಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದವು ಎಂದು ತಿಳಿದುಬಂದಿದೆ.
ಅಮೆರಿಕದ ಮಿಸೌರಿ ನೆಲೆಯಿಂದ ಇರಾನ್‌ನತ್ತ ರವಾನೆಯಾಗಿ, ಮತ್ತೆ ಮರಳಬೇಕಿದ್ದ 14 ಬಾಂಬರ್‌ಗಳು ನಿರಂತರ 37 ತಾಸುಗಳ ಕಾಲ ಹಾರಾಟ ನಡೆಸಬೇಕಿದ್ದ ಕಾರಣ, ಆ ಅವಧಿಯಲ್ಲಿ ಪೈಲಟ್‌ಗಳ ಅನುಕೂಲಕ್ಕಾಗಿ ವಿಮಾನಗಳೊಳಗೇ ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್, ಅದನ್ನು ಶೇಖರಿಸಿಡಲು ರೆಫ್ರಿಜರೇಟರ್, ವಿಶ್ರಾಂತಿ ಕೊಠಡಿಗಳು, ಶೌಚಾಲಯ ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿತ್ತು. ಅಂತೆಯೇ, ಹಾರಾಟದ ವೇಳೆಯೇ ಹಲವು ಬಾರಿ ಇವುಗಳಿಗೆ ಇಂಧನವನ್ನೂ ಮಾರ್ಗಮಧ್ಯವೇ ತುಂಬಿಸಲಾಗಿತ್ತು.
ಬಿ-2ಗಳ ಸುದೀರ್ಘ ಕಾರ್ಯಾಚರಣೆ:
ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯನ್ನು, ಇದುವರೆಗಿನ ಬಿ-2 ಬಾಂಬರ್‌ಗಳ ಸುದೀರ್ಘಕಾಪರೇಷನ್ ಎನ್ನಲಾಗಿದೆ. ಈ ಮೊದಲು, 2001ರ 9/11 ಉಗ್ರದಾಳಿಯ ಬಳಿಕ ಇವುಗಳನ್ನು ಆಫ್ಘಾನಿಸ್ತಾನದ ವಿರುದ್ಧ ಬಳಸಲಾಗಿತ್ತು.
ಇದಾಗಲೇ ಜಗತ್ತಿನ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. 3ನೇ ಮಹಾಯುದ್ಧಕ್ಕೂ ಜಗತ್ತು ರೆಡಿಯಾಗುವ ಹಾಗಾಗಿದೆ
ಇದಾಗಲೇ ಜಗತ್ತಿನ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. 3ನೇ ಮಹಾಯುದ್ಧಕ್ಕೂ ಜಗತ್ತು ರೆಡಿಯಾಗುವ ಹಾಗಾಗಿದೆ ಸ್ಥಿತಿ. ಎಲ್ಲಿ ನೋಡಿದರೂ ಯುದ್ಧದ ಭೀತಿ. ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಅಗ್ನಿ ಅವಘಡ, ಮತ್ತೊಂದೆಡೆ ಊಹಿಸಲು ಸಾಧ್ಯವಿಲ್ಲದ ರೀತಿಯ ಅಪಘಾತಗಳು, ಸಾವು-ನೋವುಗಳು... ಹೀಗೆ ಕಳೆದೊಂದು ವರ್ಷದಿಂದ ಇನ್ನಿಲ್ಲದಂಥ ಸ್ಥಿತಿ ಇಡೀ ಜಗತ್ತಿನಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಇದಾಗಲೇ ಹಲವು ಕಾಲಜ್ಞಾನಿಗಳು, ಜ್ಯೋತಿಷಿಗಳು ಭವಿಷ್ಯ ನುಡಿದದ್ದು ಕೂಡ ನಿಜವಾಗಿದೆ. ಆದರೆ ಕುತೂಹಲ ಎನ್ನುವಂತೆ 2023ರಲ್ಲಿ ಇಸ್ರೇಲಿಗಳು ಆಧುನಿಕ ನಾಸ್ಟ್ರಾಡಾಮಸ್ ಎಂದೇ ಕರೆಯುವ ಅಫ್ಶಿನ್ ಇಮ್ರಾನಿ ಬರೆದಿರುವ ಭವಿಷ್ಯವಾಣಿ ಅಕ್ಷರಶಃ ನಿಜವಾಗಿರುವುದು ಈಗ ಬೆಳಕಿಗೆ ಬಂದಿದೆ.
ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಸೇರಿದಂತೆ ಜಗತ್ತಿನ ಹಲವು ವಿಷಯಗಳ, ಆಗುಹೋಗುಗಳ ಬಗ್ಗೆ ಈತ 2023ರಲ್ಲಷ್ಟೇ ಬರೆದಿಟ್ಟಿದ್ದು, ಅದೀಗ ಬೆಳಕಿಗೆ ಬಂದಿದೆ. ಇದರಲ್ಲಿ ಜಗತ್ತಿನ ವಿವಿಧ ದೇಶಗಳ ಸ್ಥಿತಿಗತಿಗಳ ಬಗ್ಗೆ ಇದೆ. ಭಾರತದ ಸ್ಥಿತಿಯ ಬಗ್ಗೆಯೂ ಉಲ್ಲೇಖವಾಗಿದೆ. ಪಾಕಿಸ್ತಾನವು ತನ್ನೆಲ್ಲಾ ಆಕ್ರಮಿತ ಭೂಮಿಯನ್ನು ಭಾರತಕ್ಕೆ ಮರಳಿಸುವ ಸ್ಥಿತಿ ಬರುತ್ತದೆ, ಮತ್ತು ಪಾಕಿಸ್ತಾನ ಸಂಪೂರ್ಣವಾಗಿ ಪರಮಾಣು ನಿಶ್ಯಸ್ತ್ರೀಕರಣಗೊಳ್ಳುತ್ತದೆ ಎಂದು ಆತ ಬರೆದಿದ್ದಾನೆ.
ಇನ್ನೊಂದು ಕುತೂಹಲದ ವಿಷಯ ಇದರಲ್ಲಿ ಇರುವುದು ಏನೆಂದರೆ, ಬಾಂಗ್ಲಾದೇಶ ಅಸ್ತಿತ್ವದಲ್ಲಿ ಇರುವುದಿಲ್ಲ, ಬಾಂಗ್ಲಾದೇಶದ ಎಲ್ಲಾ ಭೂಮಿ ಕೂಡ ಭಾರತಕ್ಕೆ ಮರಳುತ್ತದೆ. ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಟಾಪ್ಮೋಸ್ಟ್ ಸ್ಥಾನದಲ್ಲಿರುವ ಚೀನಾದ ಆರ್ಥಿಕತೆಯು ದಿಢೀರ್ ಎಂದು ಕುಸಿಯುತ್ತದೆ ಮತ್ತು ಅದು ಎಲ್ಲಾ ಆಕ್ರಮಿತ ಪ್ರದೇಶಗಳನ್ನು ಕಳೆದುಕೊಳ್ಳುತ್ತದೆ ಎಂದು ಇದರಲ್ಲಿ ಬರೆಯಲಾಗಿದೆ. ಆದರೆ ಭಾರತದ ಪಾಲಿಗೆ ಮಾತ್ರ ಇದು ಒಳ್ಳೆಯ ಯುಗವಾಗಿರಲಿದೆ. ಭಾರತೀಯ ಶತಮಾನ ಪ್ರಾರಂಭವಾಗಿದೆ ಎಂದು ಅಫ್ಶಿನ್ ಇಮ್ರಾನಿ ಬರೆದಿದ್ದಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.