ಉಗ್ರರ ಬಳಿ ಬುಲೆಟ್ ಫ್ರೂಫ್ ಜಾಕೆಟ್’ನ್ನೇ ಭೇದಿಸುವ ಗುಂಡು

By Suvarna Web DeskFirst Published Jan 13, 2018, 8:36 AM IST
Highlights

ಭಾರತೀಯ ಯೋಧರ ಗುಂಡು ನಿರೋಧಕ ಕವಚವನ್ನೂ ಭೇದಿಸಿ, ದೇಹ ಪ್ರವೇಶಿಸಿ ಛಿದ್ರಗೊಳಿಸುವ ಉಕ್ಕಿನ ಬುಲೆಟ್‌ಗಳನ್ನು ಪಾಕಿಸ್ತಾನ ಮೂಲದ ಉಗ್ರರು ಬಳಸುತ್ತಿದ್ದು, ಇದರಿಂದ ಎಚ್ಚೆತ್ತಿರುವ ಕೇಂದ್ರ , ಅತ್ಯಾಧುನಿಕ ಬುಲೆಟ್ ಪ್ರೂಫ್ ಜಾಕೆಟ್ ಖರೀದಿಸಲು ಮುಂದಾಗಿದೆ.

ನವದೆಹಲಿ: ಭಾರತೀಯ ಯೋಧರ ಗುಂಡು ನಿರೋಧಕ ಕವಚವನ್ನೂ ಭೇದಿಸಿ, ದೇಹ ಪ್ರವೇಶಿಸಿ ಛಿದ್ರಗೊಳಿಸುವ ಉಕ್ಕಿನ ಬುಲೆಟ್‌ಗಳನ್ನು ಪಾಕಿಸ್ತಾನ ಮೂಲದ ಉಗ್ರರು ಬಳಸುತ್ತಿದ್ದು, ಇದರಿಂದ ಎಚ್ಚೆತ್ತಿರುವ ಕೇಂದ್ರ , ಅತ್ಯಾಧುನಿಕ ಬುಲೆಟ್ ಪ್ರೂಫ್ ಜಾಕೆಟ್ ಖರೀದಿಸಲು ಮುಂದಾಗಿದೆ.

ಗಡಿ ನಿಯಂತ್ರಣ ರೇಖೆಯಿಂದಾಚೆ ಇರುವ ಭಯೋತ್ಪಾದಕರು ತಮ್ಮ ದಾಳಿ ತಂತ್ರಗಳನ್ನು ಪದೇಪದೇ ಬದಲಿಸುತ್ತಿದ್ದಾರೆ. ಲಷ್ಕರ್ , ಜೈಷ್ ಭಯೋತ್ಪಾದಕರು ಇದೀಗ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಚೀನಾದ ಉಕ್ಕಿನಿಂದ ತಯಾರಾದ ಗುಂಡುಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸ್ಟೀಲ್ ಗುಂಡುಗಳು ಯೋಧರು ಧರಿಸಿರುವ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಭೇದಿಸಿ, ಯೋಧರ ದೇಹ ಪ್ರವೇಶಿಸಿ ಭಾರಿ ಹಾನಿ ಮಾಡುತ್ತವೆ. 

ಪುಲ್ವಾಮಾದಲ್ಲಿ ಡಿ.31ರಂದು ಜೈಷ್ ಉಗ್ರರ ಜತೆಗಿನ ಚಕಮಕಿ ವೇಳೆ ಐವರು ಸಿಆರ್‌ಪಿಎಫ್ ಯೋಧರು ಹತರಾಗಿದ್ದರು. ಆಗಲೂ ಸ್ಟೀಲ್ ಗುಂಡುಗಳನ್ನು ಉಗ್ರರು ಬಳಸಿದ್ದರು. ಗುಂಡು ನಿರೋಧಕ ಕವಚವಿದ್ದರೂ ಯೋಧರು ವೀರಮರಣವನ್ನಪ್ಪಿದ್ದರು.

ತಾಮ್ರದ ಕವಚ ಹೊಂದಿರುವ ಈ ಉಕ್ಕಿನ ಗುಂಡುಗಳು ಗರಿಷ್ಠ ಶಕ್ತಿಯೊಂದಿಗೆ ನುಗ್ಗುತ್ತವೆ. ದಾಳಿ ಸಂದರ್ಭದಲ್ಲೂ ತಮ್ಮ ವಿನ್ಯಾಸವನ್ನು ಉಳಿಸಿಕೊಳ್ಳುತ್ತವೆ. ಭಾರತೀಯ ಯೋಧರು ಧರಿಸುವ ಬುಲೆಟ್ ಪ್ರೂಫ್ ಜಾಕೆಟ್‌ಗಳು ಸ್ಟೀಲ್ ಬುಲೆಟ್‌ಗಳ ದಾಳಿಯನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಇದು ಆತಂಕಕ್ಕೆ ಕಾರಣವಾಗಿದೆ.

click me!