ದಿಲ್ಲಿಯಲ್ಲಿ ವಾಯು ಮಾಲಿನ್ಯ ನಿಗ್ರಹಕ್ಕೆ 10 ತುರ್ತು ಕ್ರಮಗಳು: ಟೆರಿ ಶಿಫಾರಸು

Published : Nov 08, 2016, 09:43 AM ISTUpdated : Apr 11, 2018, 12:47 PM IST
ದಿಲ್ಲಿಯಲ್ಲಿ ವಾಯು ಮಾಲಿನ್ಯ ನಿಗ್ರಹಕ್ಕೆ 10 ತುರ್ತು ಕ್ರಮಗಳು: ಟೆರಿ ಶಿಫಾರಸು

ಸಾರಾಂಶ

ಹತ್ತು ವರ್ಷ ಹಳೆಯ ವಾಹನಗಳನ್ನು ಚಲಾಯಿಸದಂತೆ ನಿರ್ಬಂಧಿಸಿರಿ. ವೇಗ ಮಿತಿ ನಿಯಮಗಳನ್ನು ಉಲ್ಲಂಘಿಸುವ ಹಾಗೂ ಮಾಲಿನ್ಯ ಪರೀಕ್ಷೆಯ ಪ್ರಮಾಣಪತ್ರ ಇಲ್ಲದಿರುವ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ವಿಧಿಸಿರಿ.

ಬೆಂಗಳೂರು(ನ. 08): ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಇಲ್ಲಿಯ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್'ಟಿಟ್ಯೂಟ್(ಟಿಇಆರ್'ಐ) ಸಂಸ್ಥೆ ಒಂದಷ್ಟು ಸಲಹೆಗಳನ್ನು ದಿಲ್ಲಿ ಸರಕಾರಕ್ಕೆ ಹಾಗೂ ಕೇಂದ್ರ ಪರಿಸರ ಇಲಾಖೆಗೆ ನೀಡಿದೆ. ಇವುಗಳ ಪೈಕಿ 10 ತುರ್ತು ಕ್ರಮಗಳ ಪಟ್ಟಿಯನ್ನು ಆರಿಸಿ ಇಲ್ಲಿ ನೀಡಿದ್ದೇವೆ. ಇದರಲ್ಲಿ, ಕೇಜ್ರಿವಾಲ್ ಸರಕಾರ ಹಿಂದೆ ಪ್ರಯೋಗ ಮಾಡಿದ್ದ ಸಮ-ಬೆಸ ಯೋಜನೆಯೂ ಒಳಗೊಂಡಿದೆ.

ದಿಲ್ಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಟೆರಿ ಶಿಫಾರಸು ಮಾಡಿದ 10 ತುರ್ತು ಕ್ರಮಗಳು:

1) ಕೃಷಿ ತ್ಯಾಜ್ಯ ಸುಡುವ ಪ್ರಮಾಣವನ್ನು ಕಡಿಮೆ ಮಾಡಿಸಿ. ಈ ನಿಟ್ಟಿನಲ್ಲಿ ಬೆಂಕಿಯನ್ನು ಪತ್ತೆಹಚ್ಚಬಲ್ಲ ಸ್ಯಾಟಿಲೈಟ್ ಆಧಾರಿತ ಸಾಧನಗಳು ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಶನ್'ಗಳನ್ನು ಬಳಸಿಕೊಳ್ಳಬಹುದು. ಕೃಷಿ ತ್ಯಾಜ್ಯಗಳನ್ನು ಸುಡುವವರಿಗೆ ಭಾರೀ ದಂಡ ವಿಧಿಸಿರಿ. ಇದರ ಜೊತೆಗೆ, ರೈತರಿಂದ ಮುಂಚಿತವಾಗಿಯೇ ಕೃಷಿ ತ್ಯಾಜ್ಯಗಳನ್ನು ಸರಕಾರವೇ ಕೊಳ್ಳಬೇಕು(ಕೆಜಿಗೆ ಸುಮಾರು 3 ರೂಪಾಯಿಯಂತೆ). ಈ ತ್ಯಾಜ್ಯಗಳನ್ನು ಇಂಧನ ಮತ್ತಿತರ ಶಕ್ತಿಯನ್ನಾಗಿ ಪರಿವರ್ತಿಸಬಹುದು.

ವಾಹನಗಳ ಮಾಲಿನ್ಯ ತಡೆಯುವುದು:

2) ಆಸ್ಪತ್ರೆ ಮೊದಲಾದ ಅತ್ಯಗತ್ಯ ತುರ್ತು ಸ್ಥಳಗಳನ್ನು ಹೊರತುಪಡಿಸಿ ರಾಜಧಾನಿ ವ್ಯಾಪ್ತಿ ಪ್ರದೇಶ(ಎನ್'ಸಿಆರ್)ದಲ್ಲಿನ ಎಲ್ಲಾ ಸರಕಾರೀ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕದ ಪ್ರಮಾಣವನ್ನು 10 ಪಟ್ಟು ಹೆಚ್ಚಿಸಿರಿ. ಪಾರ್ಕಿಂಗ್ ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವವರಿಗೆ ಭಾರೀ ದಂಡ ವಿಧಿಸಿ. ಸರಕಾರೀ ಬಸ್ಸು ಮತ್ತು ಮೆಟ್ರೋಗಳಲ್ಲಿ ಉಚಿತ ಪ್ರಯಾಣದ ಆಫರ್ ನೀಡಿರಿ. ಇದರಿಂದ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುತ್ತದೆ.

3) ಎನ್'ಸಿಆರ್'ನಲ್ಲಿ ಎಲ್ಲಾ ಖಾಸಗಿ ವಾಹನಗಳಿಗೆ ಸಮ-ಬೆಸ ಯೋಜನೆಯನ್ನು ಅನುಷ್ಠಾನಗೊಳಿಸಿ. ಟ್ರಾಫಿಕ್ ಹೆಚ್ಚಿರುವ ಕಡೆ ವಾಹನಗಳಿಗೆ ಟೋಲ್ ಹಾಕಿರಿ. ದಿಲ್ಲಿಯಾದ್ಯಂತ ಮಾಲಿನ್ಯ ಅಪಾಯದ ಮಟ್ಟದಲ್ಲಿರುವ ನಿರ್ದಿಷ್ಟ ವಲಯಗಳನ್ನು ಗುರುತಿಸಿ, ಅಲ್ಲಿ ಯಾವುದೇ ವಾಹನಗಳ ಪ್ರವೇಶವನ್ನೇ ನಿರ್ಬಂಧಿಸಿ ಅಥವಾ ಟೋಲ್ ವಿಧಿಸಿ. ಈ ಪ್ರದೇಶಗಳಲ್ಲಿ ನೊಂದಾಯಿತ ಇ-ರಿಕ್ಷಾ/ಸೈಕಲ್/ಎಲೆಕ್ಟ್ರಿಕ್ ವಾಹನಗಳಿಗಷ್ಟೇ ಪ್ರವೇಶಾನುಮತಿ ನೀಡಿರಿ.

4) ಹತ್ತು ವರ್ಷ ಹಳೆಯ ವಾಹನಗಳನ್ನು ಚಲಾಯಿಸದಂತೆ ನಿರ್ಬಂಧಿಸಿರಿ. ವೇಗ ಮಿತಿ ನಿಯಮಗಳನ್ನು ಉಲ್ಲಂಘಿಸುವ ಹಾಗೂ ಮಾಲಿನ್ಯ ಪರೀಕ್ಷೆಯ ಪ್ರಮಾಣಪತ್ರ ಇಲ್ಲದಿರುವ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ವಿಧಿಸಿರಿ.

5) ಎಲ್ಲಾ ರಸ್ತೆಗಳನ್ನು ವ್ಯಾಕ್ಯೂಂ ಕ್ಲೀನಿಂಗ್ ಮೂಲಕವೋ ಅಥವಾ ನೀರು ಸಿಂಪಡಿಸುವ ಮೂಲಕವೋ ಧೂಳನ್ನು ನಿಯಂತ್ರಿಸಿ.

ವಿದ್ಯುತ್ ಘಟಕಗಳ ಮಾಲಿನ್ಯ ತಡೆಗೆ:

6) ದಿಲ್ಲಿಯಲ್ಲಿರುವ ವಿದ್ಯುತ್ ಘಟಕಗಳನ್ನು ನಿಲ್ಲಿಸಿರಿ. ಸೆಂಟ್ರಲ್ ಗ್ರಿಡ್'ಗಳಿಂದ ಎಲ್ಲ ಅಗತ್ಯ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳಿ. ರಾಜಧಾನಿ ವ್ಯಾಪ್ತಿಯಲ್ಲಿ ಆಸ್ಪತ್ರೆಯಂತಹ ತುರ್ತು ಅಗತ್ಯ ಸೇವಾ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಡೀಸೆಲ್ ಜನರೇಟರ್'ಗಳನ ಬಳಕೆಯನ್ನೇ ನಿಷೇಧಿಸಿರಿ.

7) ರಾಜಧಾನಿ ವ್ಯಾಪ್ತಿ ಪ್ರದೇಶ(ಎನ್'ಸಿಆರ್)ದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಿರಿ.

ತ್ಯಾಜ್ಯಗಳನ್ನ ಸುಡದಂತೆ ನೋಡಿಕೊಳ್ಳಿ:

8) ಎನ್'ಸಿಆರ್'ನಾದ್ಯಂತ ಎಲ್ಲಾ ಕಸ ವಿಲೇವಾರಿ ಸ್ಥಗಳಲ್ಲಿ ತ್ಯಾಜ್ಯಗಳನ್ನು ಸುಡದಂತೆ ನೋಡಿಕೊಳ್ಳಿ. ಚಳಿಗಾಲದಲ್ಲಿ ಅಗತ್ಯವಿರುವವರಿಗೆ ಬೆಚ್ಚಗಿನ ಮನೆಗಳ ಸೌಲಭ್ಯ ನೀಡಿರಿ. ಇದರಿಂದ ಮೈಬೆಚ್ಚಗೆ ಮಾಡಿಕೊಳ್ಳಲು ಕಟ್ಟಿಗೆಗಳನ್ನು ಉರಿಸುವುದು ತಪ್ಪುತ್ತದೆ.

ನಾಗರಿಕರ ಆರೋಗ್ಯ:

9) ಮುಂದಿನ ಕೆಲ ದಿನಗಳ ಕಾಲ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಿಸಿರಿ. ಕಂಪನಿಗಳು ತಮ್ಮ ಅರ್ಧದಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಿ. ಇದರಿಂದ ಟ್ರಾಫಿಕ್'ನಲ್ಲಿ ಜನರು ಓಡಾಡುವುದು ತಪ್ಪುತ್ತದೆ. ರಸ್ತೆಗಿಳಿಯುವ ವಾಹನಗಳ ಪ್ರಮಾಣವೂ ಕಡಿಮೆಯಾಗುತ್ತದೆ.

10) ಕಟ್ಟಡಗಳಲ್ಲಿ ಏರ್'ಕಂಡೀಷನರ್'ಗಳ ಬಳಕೆ ಕಡಿಮೆ ಮಾಡಬೇಕು; ಅಗತ್ಯವಿದ್ದವರಿಗೆ ಏರ್'ಮಾಸ್ಕ್'ಗಳನ್ನು ಉಚಿತವಾಗಿ ವಿತರಿಸಬೇಕು; ಜನರು, ಅದರಲ್ಲೂ ಮಕ್ಕಳು, ವೃದ್ಧರು ಹಾಗೂ ಸೂಕ್ಷ್ಮ ಆರೋಗ್ಯವಂತರು ಆದಷ್ಟು ಮನೆಯ ಒಳಗೆಯೇ ಇರಲಿ; ಪಟಾಕಿಗಳನ್ನು ಸಿಡಿಸುವ ದೀಪಾವಳಿಯಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲು ಉತ್ತೇಜಿಸಿ; ಮಾಲಿನ್ಯದ ಬಗ್ಗೆ ಜಾಗೃತಿ ಅಭಿಯಾನಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿರಿ.

(ಮಾಹಿತಿ: ಟೆರಿ ವೆಬ್'ಸೈಟ್)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!