ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ!

Published : Aug 18, 2019, 10:43 AM IST
ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ!

ಸಾರಾಂಶ

ತಮಾಷೆಯಲ್ಲ...! ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ ತೆಲಂಗಾಣದ ಪೊಲೀಸ್‌ ಪೇದೆ!

ಹೈದರಾಬಾದ್[ಆ.18]: ಈ ಕಾಲದಲ್ಲಿ ಯಾರನ್ನು ನಂಬುವುದು ಎಂದೇ ಗೊತ್ತಾಗುವುದಿಲ್ಲ. ತೆಲಂಗಾಣದಲ್ಲಿ ಪೊಲೀಸ್‌ ಪೇದೆಯೊಬ್ಬನಿಗೆ ಆ.15ರಂದು ‘ಉತ್ತಮ ಕಾನ್‌ಸ್ಟೆಬಲ್‌’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.ಆದರೆ, ಪ್ರಶಸ್ತಿ ಮರುದಿನವೇ ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.

ಮೆಹಬೂಬ್‌ನಗರ ಪೊಲೀಸ್‌ ಠಾಣೆಯ ಪೇದೆ ಪಲ್ಲೆ ತಿರುಪತಿ ರೆಡ್ಡಿ ಎಂಬಾತ ಮರಳು ಸಾಗಣೆಗಾಗಿ 17 ಸಾವಿರ ರು. ಹಣ ಲಂಚ ಪಡೆಯುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಪೇದೆಯನ್ನು ಎಸಿಬಿ ಕೋರ್ಟ್‌ಗೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು