ದೇಶದ ಗಡಿಯಲ್ಲಿ ಭಾರತದ ಸೇನೆಯಂತೆ ದೇಶದ ಒಳಗಿನ ವಿಧ್ವಂಸಕ ಕೃತ್ಯ ತಡೆಯಲು ಸೇನೆ/ ತೆಲಂಗಾಣದ ಎಂಎಲ್ಎ ಖಾಸಗಿ ಸೇನೆ/ ಬೆಂಗಳೂರಿನಲ್ಲಿ ತರಬೇತಿ ಶಿಬಿರ
ಹೈದರಾಬಾದ್[ಸೆ. 19] ವಿವಾದಾತ್ಮಕ ಹೇಳಿಕೆಗಳಿಗೆ ಸದಾ ಸುದ್ದಿಯಾಗುವ ಬಿಜೆಪಿ ಎಂಎಲ್ ಟಿ. ರಾಜಾ ಸಿಂಗ್ ಈಗ ಮತ್ತೊಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ.ದೇಶಕ್ಕೆ ಮಾರಕವಾದ ವಿಧ್ವಂಸಕ ಕೃತ್ಯ ನಡೆಸುವವರನ್ನು ತಡೆಯಲು ಖಾಸಗಿ ಸೇನೆಯೊಂದನ್ನು ಸಿದ್ಧ ಮಾಡುವುದಾಗಿ ಸಿಂಗ್ ಹೇಳಿದ್ದಾರೆ.
ಹೈದರಾಬಾದ್ ಘೋಷಮಹಲ್ ಕ್ಷೇತ್ರ ಪ್ರತಿನಿಧಿಸುವ ಶಾಸಕರು ತೆಲುಗು ಮತ್ತು ಹಿಂದಿಯಲ್ಲಿ ಒಂದೊಂದು ವಿಡಿಯೋ ಸಂದೇಶ ಬಿಡುಡೆ ಮಾಡಿದ್ದಾರೆ.ಅಗತ್ಯ ಬಿದ್ದರೆ ತಮ್ಮ ಸೇನೆ ದೇಶದ ಹೊರಕ್ಕೆ ತರೆಳಿಯೂ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.
undefined
ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!
ಬೆಂಗಳೂರಿನಲ್ಲಿ ತಮ್ಮ ಸೇನೆಗೆ 10 ದಿನಗಳ ತರಬೇತಿ ನೀಡಲಾಗುತ್ತದೆ. ಹಿಂದು ಧರ್ಮ ಕಾಪಾಡಿ ಹಿಂದು ರಾಷ್ಟ್ರ ಪರಿಕಲ್ಪನೆಯಲ್ಲಿ ಸೇನೆ ಇರಲಿದೆ ಎಂದು ತಿಳಿಸಿದ್ದಾರೆ.
ಭಾರತದ ಸೇನೆ ಹೇಗೆ ದೇಶದ ಗಡಿಯಲ್ಲಿ ಹೊರಗಿನ ಉಗ್ರರ ಅಟ್ಟಹಾಸವನ್ನು ಅಡಗಿಸುತ್ತಾ ಬಂದಿದೆಯೋ ಅದೇ ರೀತಿ ಈ ಸೇನೆ ದೇಶದ ಒಳಗಣ ವಿಧ್ವಂಸಕರನ್ನು ಬೇಟೆಯಾಡಲಿದೆ.
ಮುಂದಿನ ದಿನಗಳಲ್ಲಿ ದೇಶದ ಎಲ್ಲ ಕಡೆ ಸೇನೆಯ ಶಾಖೆಗಳನ್ನು ತೆರೆಯಲಾಗುತ್ತದೆ.ದೇಶ ವಿರೋಧಿಗಳನ್ನು ನರಕಕ್ಕೆ ಕಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಮೊದಲಿಗೆ ಮೂರು ದಿನದ ಕ್ಯಾಂಪ್ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಈಗ ಅದನ್ನು 10 ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಸಿಂಗ್ಬ ತಿಳಿಸಿದ್ದಾರೆ.