
ಕೊಪ್ಪಳ(ಅ.12): ತಾನು ಪ್ರೀತಿಸಿದ ಯುವತಿಗೆ ಬೇರೆ ಮದುವೆ ಮಾಡಲು ಆಕೆಯ ಪೋಷಕರು ನಿರ್ಧರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಸೆಲ್ಫಿ ವಿಡಿಯೋ ಮಾಡಿಟ್ಟು ಕಿರಣ್ ಎಂಬಾತ ಹುಡುಗಿ ಮನೆ ಮುಂದೆಯೇ ವಿಷ ಕುಡಿದು ಸಾವನ್ನಪ್ಪಿದ್ದಾರೆ. ಗಂಗಾವತಿಯ ತಾಲೂಕಿನ ಜೀರಾಳ ಕಲ್ಗುಡಿ ನಿವಾಸಿಯಾಗಿರುವ ಪ್ರಿಯಕರ ಕಿರಣ್, ಮುನಿರಾ ಬಾದ್'ನಲ್ಲಿರುವ ಸಂಬಂಧಿ ಶ್ರಾವ್ಯರನ್ನು ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದ. ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್'ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಬಿಇ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಈ ವಿಚಾರ ಮನೆಯವರಿಗೂ ತಿಳಿದಿತ್ತು.
ಆದರೆ, ಯುವತಿಗೆ ಆಕೆಯ ಪೋಷಕರು ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಇದರಿಂದ ಮನನೊಂದ ಮನನೊಂದ ಕಿರಣ್, ಸೆಲ್ಫೀ ವಿಡಿಯೋ ಮಾಡಿ ಯುವತಿಯ ಮನೆ ಮುಂದೆ ವಿಷ ಸೇವಿಸಿದ್ದಾರೆ. ಈತನನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 10 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಕಿರಣ್ ಹೇಳಿದ್ದೇನು?: 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಕಾರಣ ನನ್ನ ಪ್ರೀತಿ. ನಾನು ಮತ್ತು ಶ್ರಾವ್ಯಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಕೇವಲ ಪ್ರೀತಿ ಮಾತ್ರವಲ್ಲ, ನಮ್ಮ ನಡುವೆ ಲಿವಿಂಗ್ ಟುಗೆದರ್ ಸಂಬಂಧ ಇದೆ. ಹೀಗಾಗಿ ನಿನ್ನನ್ನೇ ಮದುವೆಯಾಗೋದಾಗಿ ತನ್ನ ಮನೆಯವರನ್ನು ಒಪ್ಪಿಸೋದಾಗಿ ಶ್ರಾವ್ಯಾ ಹೇಳಿದ್ದಳು. ಆದರೆ ಈಗ ಬೇರೆಯವನ ಜೊತೆ ಮದುವೆಯಾಗಲು ಮುಂದಾಗಿದ್ದಾಳೆ. ಆಕೆಯನ್ನ ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದೇನೆ. ಆಕೆ ಸಿಗದಿದ್ರೆ ನನಗೆ ಈ ಜೀವನ ಬೇಡ. ಅಮ್ಮಾ ನನ್ನನ್ನು ಕ್ಷಮಿಸು. ಶ್ರಾವ್ಯಾಳನ್ನು ಮರೆತು ಬದುಕಲು ನನಗೆ ಸಾಧ್ಯವಿಲ್ಲ. ದಯಮಾಡಿ ನನ್ನನ್ನು ಕ್ಷಮಿಸಿ. ಅಮ್ಮಾ ಮುಂದಿನ ಜನ್ಮ ಇದ್ರೆ ನನಗೆ ನೀನೆ ಅಮ್ಮನಾಗಿರಬೇಕು. ಅಕ್ಕ ಅಮ್ಮನನ್ನು ನೀನೇ ನೋಡಿಕೊಳ್ಳಬೇಕು' ಅಂತ ಕಿರಣ್ ವಿಡಿಯೋದಲ್ಲಿ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.