
ಚೆನ್ನೈ(ಡಿ.11): ತಮಿಳು ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮೃತಪಟ್ಟು ಒಂದು ವಾರವಾಯಿತು. ರಾಜ್ಯ, ದೇಶ ಹಾಗೂ ವಿಶ್ವದಾದ್ಯಂತ ಲಕ್ಷಾಂತರ ಜನರು ಕಂಬನಿ ಮಿಡಿದರು. ನೂರಾರು ಜನರು ಅಮ್ಮನ ಅಗಲಿಕೆಯ ನೋವು ತಾಳಲಾರದೆ ಆತ್ಮಹತ್ಯೆಯನ್ನು ಮಾಡಿಕೊಂಡರು.
ಅಮ್ಮನಿಗಾಗಿ ಹಲವರು ವಿವಿಧ ರೀತಿಯ ತ್ಯಾಗ ಮಾಡಿದ್ದಾರೆ. ಇಲ್ಲೊಬ್ಬ ಪೊಲೀಸ್ ಪೇದೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಅಮ್ಮನ ಕೆಲಸಕ್ಕೆ ಮುಂದಾಗಿದ್ದಾನೆ. ಅದೇನಂತೀರಾ ಜಯಲಲಿತಾ ಅವರಿಗಾಗಿ ದೇಗುಲ ಕಟ್ಟಲು ಹೊರಟಿದ್ದಾನೆ. 45 ವರ್ಷದ ಆರ್. ವೇಲುಮುರಗನ್ ಅಮ್ಮನ ಮಹಾನ್ ಕಾರ್ಯಕ್ಕೆ ಮುಂದಾಗಿರುವ ವ್ಯಕ್ತಿ.
ಚೆನ್ನೈನ ಒಡಪಟ್ಟಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದ ಈತ ಅಮ್ಮನ ನಿಧನದ ನಂತರ ಪೇದೆ ಕೆಲಸವನ್ನು ಬಿಟ್ಟು ಅಮ್ಮನ ದೇಗುಲ ಮುಂದಾಗಿದ್ದಾನೆ. 1999 ಮತ್ತು 2002ರ ಅವಧಿಯಲ್ಲಿ ಜಯಲಲಿತಾ ಭದ್ರತಾ ತಂಡದಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ. ಕಾಲೇಜಿನ ದಿನಗಳಲ್ಲಿ ಅಮ್ಮನೆ ಈತನಿಗೆ ಸ್ಫೂರ್ತಿಯಾಗಿದ್ದರು. ಈತನ ತಂದೆ ಎಂಜಿಆರ್'ನ ಅಭಿಮಾನಿಯಾಗಿದ್ದರು.
2017ರ ಫೆಬ್ರವರಿ ಹೊತ್ತಿಗೆ ಅಮ್ಮನ ದೇಗುಲವನ್ನು ಪೂರ್ಣಗೊಳಿಸುತ್ತಾನಂತೆ. ಜಯಲಲಿತಾ ಹುಟ್ಟಿದ ಹಬ್ಬದ ದಿನವಾದ ಫೆಬ್ರವರಿ 24 ರಂದು ದೇಗುಲವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಮ್ ಅವರನ್ನು ಆಹ್ವಾನಿಸುತ್ತಾನಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.