'ಅಮ್ಮ' ಹಾಸಿಗೆ ಹಿಡಿದಿದ್ದೇ ತಡ, ಬೆನ್ನಿಗಿದ್ದ ಬೆಂಗಲಿಗರು ಮಾಡಿದ್ದೇನು..? ವಿರೋಧ ಪಕ್ಷಗಳ ನಡೆ ಹೇಗಿದೆ..?

By Internet DeskFirst Published Oct 5, 2016, 3:19 AM IST
Highlights

ಚೆನ್ನೈ(ಅ.05): 'ಅಮ್ಮ' ಹಾಸಿಗೆ ಹಿಡಿದಿದ್ದೇ ತಡ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಂಚಲನ ಉಂಟಾಗಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಸಿಗೆ ಹಿಡಿದು ಮಲಗಿರುವುದು ರಾಜ್ಯ ರಾಜಕಾರಣದಲ್ಲಿ  ಬದಲಾವಣೆಯ ಗಾಳಿಯನ್ನು ಬೀಸುತ್ತಿದೆ. ಅಮ್ಮನ ಬೆನ್ನಿಗೆ ನಿಂತಿದ್ದವರೆ ಅಧಿಕಾರಕ್ಕೆ ಮುಗಿ ಬಿಳುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. 

ಒಂದು ಕಡೆ ಆಸ್ಪತ್ರೆಯಲ್ಲಿರುವ  ಜಯಲಲಿತಾ ಬದಲು ಮತ್ತೊಬ್ಬರು ಸಿಎಂ ಸ್ಥಾನವನ್ನು ಅಲಂಕರಿಸಿ ರಾಜ್ಯವನ್ನು ಮುನ್ನಡೆಸಬೇಕೆಂಬ ಮಾತು ಅಮ್ಮನ ಆಪ್ತ ವಲಯದಲ್ಲೇ ಕೇಳಿ ಬರುತ್ತಿದೆ, ಇಷ್ಟು ದಿನ ಅಮ್ಮನ ಮುಂದೆ ಕೈ ಕಟ್ಟಿ ನಿಲ್ಲುತ್ತಿದ್ದವರು ಇಂದು ಅಧಿಕಾರಕ್ಕಾಗಿ ಲಾಬಿ ಮಾಡುತ್ತಿದ್ದಾರೆ. 

Latest Videos

ಇದಲ್ಲದೇ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮದ್ರಾಸ್ ಹೈ- ಕೋರ್ಟ್ ತಡೆಯಾಜ್ಞೆ ನೀಡಿದೆ. ಮೀಸಲಾತಿ ಪಟ್ಟಿ ಸರಿಯಿಲ್ಲ ಎಂದು ಕೋರ್ಟ್ ನಲ್ಲಿ ಡಿಎಂಕೆ ಪ್ರಶ್ನೆ ಮಾಡಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಎಲೆಕ್ಷನ್ಗೆ ತಡೆಯಾಜ್ಞೆ ನೀಡಿದೆ.

ಇದು ಎಐಎಡಿಎಂಕೆ ನಾಯಕರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿಸಿದೆ. ಇದಲ್ಲದೇ ಮತ್ತೊಂದೆಡೆ ವಿರೋಧ ಪಕ್ಷಗಳು ಬೇರೆ ಮುಖ್ಯ ಮಂತ್ರಿ ನೇಮಕಕ್ಕೇ ಆಗ್ರಹಿಸವೆ, ವಿಜಯಕಾಂತ್ ರಾಜ್ಯಕ್ಕೆ ಬೇರೊಬ್ಬ ಮುಖ್ಯಮಂತ್ರಿನ್ನು ನೇಮಿಸುವಂತೆ ಒತ್ತಾಯಿಸುತ್ತಿದ್ದಾರೆ. 

ಸಿಎಂ ಕಾರ್ಯ ನಿರ್ವಹಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿರೋದರಿಂದ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸುವವರು ಯಾರು ಎಂಬ ಪ್ರಶ್ನೆ ವಿರೋಧ ಪಕ್ಷಗಳಿಂದ ಎದ್ದಿದೆ.
ಸಿಎಂ ಇಲ್ಲದಿದ್ದಕ್ಕೆ ಕೇಂದ್ರ ನಮಗೆ ಅನ್ಯಾಯವೆಸಗಿದೆ. ಹೀಗಾಗಿ ಸಿಎಂ ಜಯಲಲಿತಾ ಅವರು ಒಂದು ಕ್ಷಣವೂ ಯೋಚಿಸದೆ ಪರ್ಯಾಯವಾಗಿ ತಾತ್ಕಾಲಿಕ ಸಿಎಂ ಆಗಿ ಯಾರನ್ನಾದರು ನೇಮಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ  ವಿಜಯಕಾಂತ್ ತಿಳಿಸಿದ್ದಾರೆ.

click me!