ಸುಂದರಿಯೊಬ್ಬಳು ತನ್ನ ಬಿಕಿನಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿದರೆ ಅದು ಸಾಕಷ್ಟು ರೀತಿಯಲ್ಲಿ ವೈರಲ್ ಆಗುತ್ತದೆ. ಅದರಲ್ಲೂ ಹೆಚ್ಚಾಗಿ ಬಿಕಿನಿ ಬ್ಯೂಟಿಯನ್ನು ಸವಿಯುವವರಿಗೆ ಇದು ಹಬ್ಬ. ಆದರೆ ಮೊನ್ನೆ ತಾಪ್ಸಿ ಪನ್ನು ತನ್ನ ಮುಂದಿನ ಚಿತ್ರ ‘ಜುಡ್ವಾ 2’ನ ಆ ತೋ ಸಹಿ ಎನ್ನುವ ಸಾಂಗ್ ಪ್ರಮೋಷನ್‌ಗಾಗಿ ಬಿಕಿನಿ ತೊಟ್ಟು ತೆಗೆಸಿಕೊಂಡಿದ್ದ ಫೋಟೋಗೆ ಒಂದು ಕಾಮೆಂಟ್ ಬಂದಿದೆ. ಅದಕ್ಕೆ ತಾಪ್ಸಿ ಕೂಡ ಉತ್ತರಿಸಿದ್ದಾಳೆ. ಅಷ್ಟಕ್ಕೂ ಆ ಕಾಮೆಂಟ್ ಏನು, ಅದಕ್ಕೆ ತಾಪ್ಸಿ ಮಾಡಿದ ಉತ್ತರವೇನು ಗೊತ್ತೇ?

‘ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನೀವು ಏಕೆ ಉಳಿದಿರುವ ಬಟ್ಟೆಗಳನ್ನೂ ಬಿಚ್ಚಬಾರದು? ಹಾಗೆ ಬಿಚ್ಚಿದ ನಿಮ್ಮ ಫೋಟೋವನ್ನು ನಿಮ್ಮ ಅಣ್ಣ, ತಮ್ಮಂದಿರು ನೋಡಿದರೆ ನಿಮ್ಮ ಬಗ್ಗೆ ಸಾಕಷ್ಟು ಹೆಮ್ಮೆ ಪಟ್ಟುಕೊಳ್ಳುತ್ತಾರೆ’ ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಪನ್ನು ‘ಕ್ಷಮಿಸಿ. ನನಗೆ ಅಣ್ಣ ತಮ್ಮಂದಿರು ಯಾರೂ ಇಲ್ಲ. ಒಂದು ವೇಳೆ ಇದ್ದಿದ್ದರೆ ಅವರನ್ನು ನಿಮ್ಮ ಜೊತೆ ಮಾತನಾಡಲು ಹೇಳುತ್ತಿದ್ದೆ. ಆದರೆ ಈಗ ಏನಿದ್ದರೂ ತಂಗಿಯ ಈ ಉತ್ತರವೇ ಕೆಲಸ ಮಾಡಲಿದೆ’ ಎಂದು ಉತ್ತರಿಸಿದ್ದಾಳೆ.
ಈ ಕಾಮೆಂಟ್ ಮತ್ತು ರಿಪ್ಲೈಗಳ ಪರ ವಿರೋಧವಾಗಿ ಮತ್ತಷ್ಟು ಜನರು ತಮ್ಮ ತಮ್ಮ ಕಾಮೆಂಟ್‌ಗಳನ್ನೂ ಸೇರಿಸಿದ್ದಾರೆ. ಹಾಡಿನ ಪ್ರಮೋಷನ್‌ಗಾಗಿ ತಾಪ್ಸಿ ಹಾಕಿದ ಫೋಟೋ ಈಗ ಬೇರೆ ರೀತಿಯ ಚರ್ಚೆ ಹುಟ್ಟುಹಾಕಿದೆ.