
ಶಿವಮೊಗ್ಗ, [ನ.11]: ಪಕ್ಷದಲ್ಲಿ ಉತ್ತಮ ಸ್ಥಾನಮಾನದ ಬಗ್ಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದು ಮಧುಬಂಗಾರಪ್ಪ ತಮ್ಮ ಕಾರ್ಯಕರ್ತರಿಗೆ ಸುಳಿವು ನೀಡಿದ್ದಾರೆ.
ಆದರೆ ಏನು ಅದು ಸಿಹಿ ಸುದ್ದಿ ಅನ್ನೋದು ಬಹಿರಂಗಪಡಿಸಿಲ್ಲ. ಇದ್ರಿಂದ ಸಹಜವಾಗಿಯೇ ಕಾರ್ಯಕರ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಮಧು ಅವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮಾತುಗಳು ಜೆಡಿಎಸ್ ಮನೆಯಿಂದ ಕೇಳಿಬಂದಿದ್ದವು. ಇದೀಗ ಮಧುಬಂಗಾರಪ್ಪ ಹೇಳಿಕೆಗೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
ಇನ್ನು ಬೈಎಲೆಕ್ಷನ್ ಸೋಲಿನ ಬಗ್ಗೆ ಮಾತನಾಡಿದ ಅವರು, ನಾನು ಸೋಲಿಗೆ ಹೆದರಿಲ್ಲ. ಬಿಜೆಪಿ ಸೇರಿ ಎಲ್ಲ ಪಕ್ಷದವರು ನನಗೆ ಮತ ಹಾಕಿದ್ದಾರೆ ಗೆಲ್ಲುವ ವಿಶ್ವಾಸವಿತ್ತು.
ಬಿಎಸ್’ವೈ ಅವರನ್ನು ಶಿವಮೊಗ್ಗದಲ್ಲಿ ಕಟ್ಟಿ ಹಾಕಿ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ 12 ದಿನದಲ್ಲಿ 4.91 ಲಕ್ಷ ಮತ ಜನರು ಹಾಕಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೋಟೆಯಿಂದ ಅವರನ್ನು ಓಡಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್’ವೈ ನನ್ನ ಹೆಸರು ಹೇಳಬೇಡಿ ಅಂತಾ ಚುನಾವಣೆಯಲ್ಲಿ ಹೇಳಿಕೆ ನೀಡಿದ್ದರು. ಅವರ ಹೆಸರು ಮುಂದಿನ ದಿನದಲ್ಲಿ ಯಾರು ಹೇಳದಂತೆ ವಾತಾವರಣ ಶಿವಮೊಗ್ಗದಲ್ಲಿ ಆಗುವುದು ಗ್ಯಾರಂಟಿ.
ಸಿಎಂ ಆಗಿ ಮೂರುವರೆ ವರ್ಷ ಇದ್ದ ಬಿಎಸ್ ವೈ ಶಿವಮೊಗ್ಗದಲ್ಲೇ ಗೂಟಾ ಹೊಡೆದುಕೊಂಡು ಕುಳಿತಿದ್ದರು. ಇಷ್ಟೊಂದು ಶಕ್ತಿ ಪ್ರಬಾವ ಇರುವ ಬಿಎಸ್’ವೈಗೆ ಮತದಾರರು ಈ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಕ್ಷೇತ್ರದಲ್ಲಿ ಬಿಎಸ್’ವೈ ಶಕ್ತಿ ಕುಂದಿದ್ದು, ನೈತಿಕ ಗೆಲುವು ನನಗೆ ಸಿಕ್ಕಿದೆ. ಇನ್ನು ಬಿಜೆಪಿಗೆ ನೈತಿಕ ಸೋಲು ಆಗಿದೆ ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.