ಕಸವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವಿದೆ ಎಂದರೆ ನಂಬಲಾದೀತೆ?

By Suvarna Web DeskFirst Published Dec 11, 2016, 2:28 PM IST
Highlights

ತೀವ್ರ ಶೀತ ವಾತಾವರಣ ಇರುವ ಈ ದೇಶದಲ್ಲಿ ಮನೆಗಳಿಗೆ ಶಾಖ ಕೊಡಲು ಬಹುತೇಕ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ, ಕಸವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಅದರಿಂದ ವಿದ್ಯುತ್, ಇಂಧನ ಮತ್ತಿತರ ಶಕ್ತಿಯ ಉತ್ಪಾದನೆ ಮಾಡಲಾಗುತ್ತಿದೆ.

ಲಂಡನ್(ಡಿ. 11): ಭಾರತದಲ್ಲಿ ಕಸದ್ದೇ ದೊಡ್ಡ ಚಿಂತೆ. ರಾಶಿ ರಾಶಿ ಕಸವನ್ನು ಏನು ಮಾಡಬೇಕೆಂದು ಗೊತ್ತಾಗದೇ ಭೂಮಿಯೊಳಗೆ ಹೂತು ಹಾಕಿ ಪರಿಸರಕ್ಕೆ ಧಕ್ಕೆ ತರುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಿಮಗೆ ಶಾಕ್ ಕೊಡುವಂಥ ಸುದ್ದಿ ಇದು. ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರಗಳಲ್ಲೊಂದೆನಿಸಿದ ಸ್ವೀಡನ್'ಗೆ ಕಸದ ಅಗತ್ಯವಿದೆಯಂತೆ. ತನ್ನ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಇಲ್ಲದೇ ಇರುವುದರಿಂದ ಬೇರೆ ರಾಷ್ಟ್ರಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಿದೆ.

ಸ್ವೀಡನ್'ಗೆ ಕಸ ಯಾಕೆ ಬೇಕು?
ಈ ದೇಶದಲ್ಲಿ ಪುನರ್ಬಳಕೆ ತಂತ್ರಜ್ಞಾನದ ಮೂಲಕ ಬಹುತೇಕ ಇಂಧನದ ಉತ್ಪತ್ತಿ ಮಾಡಲಾಗುತ್ತದೆ. ಕಸದ ರಾಶಿಯಿಂದ ವಿದ್ಯುತ್, ಇಂಧನವನ್ನು ತಯಾರಿಸಲಾಗುತ್ತದೆ. ಮನೆಗಳಲ್ಲಿ ಸಂಗ್ರಹವಾಗುವ ಬಹುತೇಕ ಕಸವನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ದೇಶದ ಶೇ.50ರಷ್ಟು ಪ್ರಮಾಣದ ವಿದ್ಯುತ್ ಇದೇ ಪುನರ್ಬಳಕೆ ತಂತ್ರಜ್ಞಾನದಿಂದ ತಯಾರಾಗುತ್ತದೆ. ಶೇ. 1ರಷ್ಟು ಕಸ ಮಾತ್ರ ನೆಲ ಸೇರುತ್ತದೆ ಎಂದರೆ ಅಚ್ಚರಿ ಎನಿಸುತ್ತದೆ. ಕಸವನ್ನು ಎಷ್ಟು ಉಪಯೋಗಿಸಬಹುದು ಎಂಬುದಕ್ಕೆ ಮಾದರಿ ಈ ದೇಶ.

ತೀವ್ರ ಶೀತ ವಾತಾವರಣ ಇರುವ ಈ ದೇಶದಲ್ಲಿ ಮನೆಗಳಿಗೆ ಶಾಖ ಕೊಡಲು ಬಹುತೇಕ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ, ಕಸವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಅದರಿಂದ ವಿದ್ಯುತ್, ಇಂಧನ ಮತ್ತಿತರ ಶಕ್ತಿಯ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕಾಗಿ ಹಲವು ವರ್ಷಗಳಿಂದ ಕಟ್ಟಿ ಬೆಳೆಸಿದ ಸಮರ್ಪಕ ವ್ಯವಸ್ಥೆ ಅಲ್ಲಿದೆ.

click me!