ಶಂಕಿತ ನಕ್ಸಲ್ ನಾಯಕ ರೂಪೇಶ್ ಕೊಡಗಿನ ನ್ಯಾಯಾಲಯಕ್ಕೆ ಹಾಜರ್ | ಹೆಚ್ಚಿದೆ ಪೊಲೀಸ್ ಬಂದೋಬಸ್ತ್ | ರಾಜ್ಯದ ಗಡಿಭಾಗದಲ್ಲಿ ರೂಪೇಶ್ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಕೊಡಗು (ಮಾ. 18): ನಾಳೆ ಶಂಕಿತ ನಕ್ಸಲ್ ನಾಯಕ ರೂಪೇಶ್ ಕೊಡಗಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನಲೆಯಲ್ಲಿ ಕೇರಳ-ಕೊಡಗು ಗಡಿಭಾಗದಲ್ಲಿ ಪೊಲೀಸ್ ಹಾಗೂ ಎನ್‌ಎಫ್ ಪಡೆಯಿಂದ ಭದ್ರತೆ ಹೆಚ್ಚಿಸಲಾಗಿದೆ.
ಇಂದು ಕೇರಳದ ವೈವೂರು ಕೇಂದ್ರ ಕಾರಾಗೃಹದಿಂದ ಮಡಿಕೇರಿ ಕಾರಾಗೃಹಕ್ಕೆ ರೂಪೇಶ್ ಬರಲಿದ್ದಾರೆ. ನಾಳೆ ಮುಂಜಾನೆ ಮಡಿಕೇರಿ ಕಾರಾಗೃಹದಿಂದ ನ್ಯಾಯಾಲಯಕ್ಕೆ ಬರಲಿದ್ದಾರೆ. ರೂಪೇಶ್ ಆಗಮಿಸುವ ಅರಣ್ಯ ಮಾರ್ಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ರಾಜ್ಯದ ಗಡಿಭಾಗದಲ್ಲಿ ರೂಪೇಶ್ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. 2011 ಹಾಗೂ 2013 ರಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ. ಕಾಲೂರು, ಚೇರಂಬಾಣೆ, ಭಾಗಮಂಡಲದಲ್ಲಿ ರೂಪೇಶ್ ತಂಡ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐದು ವರ್ಷಗಳ ಹಿಂದೆ ಆಂಧ್ರ ಹಾಗೂ ತಮಿಳುನಾಡು ಪೊಲೀಸರಿಂದ ಬಂಧಿತನಾಗಿದ್ದ ರೂಪೇಶ್
ಕೊಯಮತ್ತೂರಿನ ವೈವೂರು ಕೇಂದ್ರ ಕಾರಾಗೃಹದಲ್ಲಿದ್ದ.
ನಾಳೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ರೂಪೇಶ್ ನನ್ನು ಹಾಜರುಪಡಿಸಲಾಗುತ್ತದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
- ಸಾಂದರ್ಭಿಕ ಚಿತ್ರ