
ನವದೆಹಲಿ(ಫೆ.08): ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯ ಅಂತಿಮ ಹಂತದ ವಿಚಾರಣೆ ಇಂದಿನಿಂದ ಆರಂಭವಾಗಲಿದೆ.ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2 ಗಂಟೆಗೆ 2.7 ಎಕರೆ ಜಾಗದ 13 ಅರ್ಜಿಗಳ ವಿಚಾರಣೆ ಶುರು ಮಾಡಲಿದೆ.
ಕಳೆದ 6 ದಶಕಗಳಿಂದ ಬಾಕಿಯಿದ್ದ ವಿವಾದವನ್ನು 2010ರಲ್ಲಿ ಅಲಹಾಬಾದ್ ನ್ಯಾಯಾಲಯವು ತೀರ್ಪು ನೀಡಿ ಅಯೋಧ್ಯೆಯ ವಿವಾದಿತ 2.77 ಎಕರೆ ಪ್ರದೇಶವನ್ನು ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಖರ ಮತ್ತು ರಾಮ್ ಲಲ್ಲಾ ಮಧ್ಯೆ ಸಮನಾಗಿ ವಿಭಾಗಿಸುವಂತೆ ಆದೇಶ ನೀಡಿತ್ತು.
ಜೊತೆಗೆ ಹಿಂದು ಮತ್ತು ಮುಸ್ಲಿಂ ಎರಡೂ ಸಂಘಟನೆಗಳಿಗೆ ವಿವಾದವನ್ನು ಕೋರ್ಟ್’ನಿಂದ ಹೊರಗೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು. ಇದು ಸಾಧ್ಯವಾಗದಿದ್ದರೆ ಮಧ್ಯಪ್ರವೇಶಿಸುವುದಾಗಿ ತಿಳಿಸಿತ್ತು. ಮುಸ್ಲಿಂ ಕೆಲವು ಅರ್ಜಿದಾರರ ಪರ ಕಪಿಲ್ ಸಿಬಾಲ್, ದುಷ್ಯಂತ್ ದಾವೆ ಹಾಗೂ ರಾಜೀವ್ ಧವನ್ ವಾದ ಮಂಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.