ಅಕ್ರಮ ಆಸ್ತಿ ಪ್ರಕರಣ: ಶಶಿಕಲಾಗೆ ಸುಪ್ರೀಂ ಮುಖಭಂಗ

By Suvarna Web DeskFirst Published Aug 23, 2017, 6:29 PM IST
Highlights

ಆಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಕೋರಿ ವಿ.ಕೆ ಶಶಿಕಲಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ. ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಮಾಡಿದ ಆರೋಪದಡಿ ಶಶಿಕಲಾ ಹಾಗೂ ಇನ್ನಿಬ್ಬರನ್ನು ಅಪರಾಧಿಗಳೆಂದು ಸುಪ್ರೀಂ ಕೋರ್ಟ್ ಕಳೆದ ಫೆ.14ರಂದು ತೀರ್ಪು ನೀಡಿತ್ತು. ಆ ಮೂಲಕ 19 ವರ್ಷಗಳ ವಾದ-ವಿವಾದಗಳ ಬಳಿಕ ಪ್ರಕರಣಕ್ಕೆ ಅಂತಿಮ ಫಲಿತಾಂಶ ಸಿಕ್ಕಿತ್ತು.

ನವದೆಹಲಿ: ಆಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಕೋರಿ ವಿ.ಕೆ ಶಶಿಕಲಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಮಾಡಿದ ಆರೋಪದಡಿ ಶಶಿಕಲಾ ಹಾಗೂ ಇನ್ನಿಬ್ಬರನ್ನು ಅಪರಾಧಿಗಳೆಂದು ಸುಪ್ರೀಂ ಕೋರ್ಟ್ ಕಳೆದ ಫೆ.14ರಂದು ತೀರ್ಪು ನೀಡಿತ್ತು. ಆ ಮೂಲಕ 19 ವರ್ಷಗಳ ವಾದ-ವಿವಾದಗಳ ಬಳಿಕ ಪ್ರಕರಣಕ್ಕೆ ಅಂತಿಮ ಫಲಿತಾಂಶ ಸಿಕ್ಕಿತ್ತು.

ಬೆಂಗಳೂರು ವಿಶೇಷ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್'ನ ದ್ವಿಸದಸ್ಯ ನ್ಯಾಯಪೀಠ ಶಶಿಕಲಾ ನಟರಾಜನ್'ಗೆ ನಾಲ್ಕು ವರ್ಷ ಜೈಲು ಹಾಗೂ 10 ಕೋಟಿ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

 ಶಶಿಕಲಾ ಜತೆಗೆ ಇಳವರಸಿ ಹಾಗೂ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಅವರ ದತ್ತು ಪುತ್ರ ಸುಧಾಕರ್ ಅಪರಾಧಿಗಳೆಂದು ಸುಪ್ರೀಂ ಕೋರ್ಟ್  ಪ್ರಕಟಿಸಿತ್ತು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯ ಮೀರಿ ಆಸ್ತಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದರು, ಆದರೆ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು.

 

click me!