ಯೋಧರ ಮೇಲಿನ ಎಫ್‌ಐಆರ್‌ ರದ್ದಿಲ್ಲ: ಸುಪ್ರೀಂಕೋರ್ಟ್

By Web DeskFirst Published Dec 1, 2018, 8:24 AM IST
Highlights

ಯೋಧರ ಮೇಲಿನ ಎಫ್‌ಐಆರ್‌ ರದ್ದುಗೊಳಿಸಲು ಸುಪ್ರೀಂ ನಕಾರ  | 350 ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯ ಅರ್ಜಿ ವಜಾ 

ನವದೆಹಲಿ (ಡಿ. 01): ವಿಶೇಷ ಸೇನಾ ಪಡೆ (ಆಫ್‌ಸ್ಪಾ) ಕಾಯ್ದೆ ಜಾರಿಯಲ್ಲಿರುವ ಜಮ್ಮು-ಕಾಶ್ಮೀರ ಮತ್ತು ಮಣಿಪುರ ರಾಜ್ಯಗಳಲ್ಲಿ ಕಾರ್ಯಾಚರಣೆಗೆ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿದ 350ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ಯು.ಯು.ಲಲಿತ್‌ ನೇತೃತ್ವದ ಪೀಠದ ಎದುರು, ಸೇನಾ ಪಡೆ ಸಿಬ್ಬಂದಿ ಪರವಾದ ಅರ್ಜಿಗಳನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಈ ವೇಳೆ ಸೇನಾ ಸಿಬ್ಬಂದಿ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಭಯೋತ್ಪಾದನೆ ವಿರುದ್ಧ ಹೋರಾಡುವ ಸಂದರ್ಭದಲ್ಲಿ ನಮ್ಮ ಸೈನಿಕರ ಕೈಗಳು ನಡುಗದ ರೀತಿಯಲ್ಲಿ ವ್ಯವಸ್ಥೆ ಜಾರಿಗೊಳಿಸಬೇಕು,’ ಎಂದು ಪ್ರತಿಪಾದಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಹಾಗಾದರೆ, ಅಂಥ ವ್ಯವಸ್ಥೆ ಜಾರಿಗೊಳಿಸದಂತೆ ನಿಮ್ಮನ್ನು ತಡೆದವರಾದರೂ ಯಾರು? ನಿಮ್ಮ ವಾದವನ್ನು ಬೇರೆ ಕಡೆ ಇಟ್ಟುಕೊಳ್ಳಿ. ನ್ಯಾಯಾಲಯದ ಮುಂದೆ ತರಬೇಡಿ,’ ಎಂದು ತಿರುಗೇಟು ನೀಡಿತು.

 

click me!