ಟಾಯ್ಲೆಟ್‌ನಲ್ಲಿ ಮಗುವಿಗೆ ಎದೆ ಹಾಲುಣಿಸುವಂತೆ ಹೇಳಿದ ಮಾಲ್ ಸಿಬ್ಬಂದಿ

By Web DeskFirst Published Nov 30, 2018, 10:58 AM IST
Highlights

ತಾಯಿಯೊಬ್ಬಳು ಹಾಲುಣಿಸಲು ಖಾಸಗಿ ಸ್ಥಳದಲ್ಲಿ ಅವಕಾಶ ಕೊಡಿ ಎಂದಾಗ ಕೆಟ್ಟದಾಗಿ ನಡೆದುಕೊಂಡ ಮಾಲ್ ಸಿಬ್ಬಂದಿ | ಹಾಲುಣಿಸುವುದು ಮನೆಯಲ್ಲಿ, ಇಲ್ಲಲ್ಲ ಎಂದು ಅಮಾನವೀಯತೆ ಮೆರೆದ ಮಾಲ್ ಸಿಬ್ಬಂದಿ 

ಕೋಲ್ಕತಾ (ನ. 30): ಮಗುವಿಗೆ ಎದೆ ಹಾಲುಣಿಸಲು ಪ್ರತ್ಯೇಕ ಜಾಗ ಎಲ್ಲಿದೆ ಎಂಬ ಮಹಿಳೆಯೊಬ್ಬರ ಪ್ರಶ್ನೆಗೆ, ಶೌಚಾಲಯಕ್ಕೆ ತೆರಳುವಂತೆ ಸಿಬ್ಬಂದಿಗಳು ಸೂಚಿಸಿದ ಆಘಾತಕಾರಿ ಘಟನೆ ಇಲ್ಲಿನ ಮಾಲ್‌ ಒಂದರಲ್ಲಿ ನಡೆದಿದೆ.

ತಾನು ಮಾಲ್‌ನಿಂದ ಹಲವಾರು ಕಿ.ಮೀ. ದೂರದಲ್ಲಿರುವ ಬೆಹಲಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಎದೆಹಾಲು ಉಣಿಸಲು ರೂಮ್‌ ನೀಡುವಂತೆ ಮಹಿಳೆ ಕೇಳಿದಾಗ ಮಾಲ್‌ನ ಸಿಬ್ಬಂದಿ ಹಲವಾರು ಕಾರಣ ನೀಡಿ ಅದನ್ನೆಲ್ಲಾ ಮನೆಯಲ್ಲೇ ಮುಗಿಸಿಕೊಂಡು ಬರುವಂತೆ ಉಡಾಫೆಯಾಗಿ ಉತ್ತರಿಸಿದ್ದರು. ಅಲ್ಲದೇ ಶೌಚಾಲಯಕ್ಕೆ ತೆರಳುವಂತೆಯೂ ಹೇಳಿದ್ದರು. ಕೊನೆಗೆ ಎರಡನೇ ಅಂತಸ್ತಿನಲ್ಲಿರುವ ಗಾರ್ಮೆಂಟ್‌ ಅಂಗಡಿಯೊಂದು ಎದೆಹಾಲು ಉಣಿಸಲು ಅವಕಾಶ ಮಾಡಿಕೊಟ್ಟಿತ್ತು. ಈ ಘಟನೆಯನ್ನು ಮಹಿಳೆ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಳು. ಮಾಲ್‌ ಮಾಲೀಕರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಲ್‌ನ ಆಡಳಿತ ಮಂಡಳಿ ಮಹಿಳೆಯ ಕ್ಷಮೆ ಯಾಚಿಸಿದೆ.

click me!