ಕಾಂಗ್ರೆಸ್ ನಲ್ಲಿ ಬಂಡಾಯ ಭುಗಿಲೆದ್ದಿದ್ದು, ಈ ಬಂಡಾಯಕ್ಕೆ ಇದೀಗ ಹೊಸ ಟ್ವಿಸ್ಟ್ ನೀಡಲಾಗಿದೆ. ಈ ಬಂಡಾಯದ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡವೇ ಇದೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಗೆ ಅನೇಕ ಮುಖಂಡರು ಗೈರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನವೇ ಇದಕ್ಕೆ ಕಾರಣವಾಗಿದ್ದು, ಈ ಬಂಡಾಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಿಂಬಾಲಕರೇ ಕಾರಣ ಎನ್ನುವುದು ಜಗತ್ತಿಗೆ ತಿಳಿದ ಸದ್ಯ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸ್ವತಃ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮಧ್ಯೆ ಇರುವ ಭಿನ್ನಮತಕ್ಕೆ ಬಿಜೆಪಿಯನ್ನು ನಡುವೆ ಎಳೆದು ತರುತ್ತಿದ್ದಾರೆ. ಪಕ್ಷದೊಳಗಿನ ಅಂತರಿಕ ಕ್ಷೋಭೆ ಮತ್ತು ಅವರವರ ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದು, ಇದಕ್ಕೆ ಬಿಜೆಪಿಯ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ನ ಕೆಲ ನಾಯಕರು ತಮ್ಮ ಅಸ್ತಿತ್ವಕ್ಕಾಗಿ, ತಮ್ಮ ಇರುವಿಕೆಯನ್ನು ಸಾಬೀತು ಪಡಿಸಲು ಆತ್ಮೀಯ ಶಾಸಕರನ್ನು ಅವರೇ ಬಂಡೇಳೆಸಿ ಮಹಾರಾಷ್ಟ್ರ ಮೊದಲಾದ ಕಡೆ ಕಳುಹಿಸಿ ಕೊಡುತ್ತಾರೆ. ತಾವೇ ಟ್ರಬಲ್ ಶ್ಯೂಟರ್ ತರಹ ನಾಟಕವಾಡಿ ವಾಪಸ್ಸು ಕರೆಸಿಕೊಳ್ಳುತ್ತಾರೆ.
ಈ ನಾಯಕರ ಪ್ಲಾನ್ ನಂತೆ ಬೇರೆಡೆ ತೆರಳಿದವರು ಅವರು ಕರೆದಾಗ ಮತ್ತೆ ವಾಪಸಾಗುತ್ತಾರೆ. ಬಿಜೆಪಿ ಎನಾದರೂ ಆಗಬಹುದೆಂಬ ನಿರೀಕ್ಷೆ ಹೊಂದಿದೆ ಅಷ್ಟೇ , ಯಾವುದೇ ಅಪರೇಷನ್ ಮಾಡಿಲ್ಲ ಎಂದು ಮಂಜುನಾಥ್ ಹೇಳಿದರು.
ಕಾಂಗ್ರೆಸ್ ಶಾಸಕರು ಬಿಜೆಪಿಯವರ ಸಂಪರ್ಕ ಮಾಡಿದ್ದರು, ಅದರೆ ನಾವು ಹೋಗಲ್ಲ ಎನ್ನುವುದಾದರೆ ಮೊದಲು ಯಾರ ಮಾತು ಕೇಳಿ ಹೋಗಿದ್ದರು. ಅನಾವಶ್ಯಕವಾಗಿ ಯಡಿಯೂರಪ್ಪನವರನ್ನೂ ದೂರುವುದು ಸರಿಯಲ್ಲ ಎಂದರು.
ಇವರ ಬಡಿದಾಟದಲ್ಲಿ ಸರ್ಕಾರ ಉರುಳಿದರೇ ಬಿಜೆಪಿ ಸರ್ಕಾರ ರಚಿಸಲು ಮುಂದಾಗುವುದರಲ್ಲಿ ತಪ್ಪೇನು? ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿಯ ರಾಜಕೀಯ ಲಾಭ ಪಡೆದು ಕೊಳ್ಳುವುದರಲ್ಲಿ ತಪ್ಪಿಲ್ಲ.
ಅನಾವಶ್ಯಕವಾಗಿ ಕಾಂಗ್ರೆಸ್ - ಜೆಡಿಎಸ್ ನವರು ಯಡಿಯೂರಪ್ಪನವರ ಮನೆ ಮುಂದೆ ಪ್ರತಿಭಟಿಸುವ ಬದಲಾಗಿ ತಮ್ಮ ಶಾಸಕರು , ತಮ್ಮ ನಾಯಕರ ಒಳ ಅಂತರಾಳದ ಷಡ್ಯಂತ್ರದ ವಿರುದ್ಧ ಪ್ರತಿಭಟನೆ ನಡೆಸಬೇಕು.