
ಬೆಂಗಳೂರು(ಮಾ.12): ಖಾಸಗಿ ವಾಹಿನಿಯೊಂದರಲ್ಲಿ ಮುಸ್ಲಿಂ ಯುವತಿ ಸುಹಾನ ಹಿಂದೂ ದೇವರ ಹಾಡು ಹಾಡಿದಕ್ಕೆ, ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ಈಗ ಗಾಯಕಿ ಸುಹಾನ ತನ್ನ ಹಾಡಿನಿಂದಲ್ಲೇ ವಿವಾದಕ್ಕೆ ತೆರೆ ಎಳೆದಿದ್ದಾಳೆ. ಅದ್ಹೇಗೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಈ ಹಾಡು ರಾಜ್ಯ ಮಾತ್ರವಲ್ಲ. ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಶಿವಮೊಗ್ಗ ಜಿಲ್ಲೆಯ ಮುಸ್ಲಿಂ ಯುವತಿ ಸುಹಾನ ಹೀಗಂತ ಹಾಡಿದ್ದಕ್ಕೆ ಮುಸ್ಲಿಂ ಮೂಲಭೂತವಾದಿಗಳು ಧಮ್ಕಿ ಹಾಕಿದ್ದರು. ಇದಕ್ಕೆ ಭಾರಿ ಪರ-ವಿರೋಧ ವ್ಯಕ್ತವಾಗಿತ್ತು. ಈಗ ಇದೇ ಸುಹಾನ ಮುಕುಂದ ಮುರಾರಿ ಚಿತ್ರದ ನೀನೆ ರಾಮ, ನೀನೆ ಶಾಮ ಅಂತ ಹಾಡುವ ಮುಖಾಂತರ ವಿವಾದಕ್ಕೆ ತೆರೆ ಎಳೆದಿದ್ದಾಳೆ.
ಹಾಡು ಹಾಡಿದ ನಂತರ ಸುಹಾನ ಬಗ್ಗೆ ವಿವಾದವಾಗಿರೋ ಬಗ್ಗೆ ಖಾಸಗಿ ವಾಹಿನಿ ವೇದಿಕೆಯಲ್ಲಿ VT ಪ್ರದರ್ಶನ ಮಾಡಲಾಯ್ತು. ಬಳಿಕ ಮಾತಾಡಿದ ಸುಹಾನ, ನನ್ನನ್ನ ಗಾಯಕಿಯಾಗಿ ನೋಡಿ ಅಂತ ಕಣ್ಣೀರು ಹಾಕಿದ್ದಳು.
ಇನ್ನು ವೇದಿಕೆಗೆ ಆಗಮಿಸಿದ ರಿಯಾಲಿಟಿ ಶೋ ಮುಖ್ಯಸ್ಥ ರಾಘವೇಂದ್ರ ಹುಣಸೂರ್, ಸುಹಾನ ಒಬ್ಬ ಗಾಯಕಿ. ಸಿಂಗರ್ ಅನ್ನೋ ಕಾರಣಕ್ಕೆ ಆಯ್ಕೆ ಮಾಡಿದ್ದೇವೆ ಅಂತ ಸ್ಪಷ್ಟನೆ ನೀಡಿದರು. ಒಟ್ಟಿನಲ್ಲಿ ಯಾವ ವೇದಿಕೆಯಿಂದ ವಿವಾದ ಶುರುವಾಗಿತ್ತೋ. ಅದೇ ವೇದಿಕೆಯಲ್ಲಿ ಸುಹಾನ ಮತ್ತೆ ಹಾಡುವ ಮುಖಾಂತರ ವಿವಾದಕ್ಕೆ ತೆರೆ ಎಳೆದಿದ್ದಾಳೆ.
ವಿಡಿಯೋ ಕೃಪೆ: ಜೀ ಕನ್ನಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.