‘ಯೋಗಿಯೂ ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್‌ ಬ್ರಾಹ್ಮಣ ಹೇಗಾಗ್ತಾರೆ’!

Published : Jan 05, 2019, 02:47 PM ISTUpdated : Jan 05, 2019, 06:05 PM IST
‘ಯೋಗಿಯೂ ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್‌ ಬ್ರಾಹ್ಮಣ ಹೇಗಾಗ್ತಾರೆ’!

ಸಾರಾಂಶ

‘ರಾಹುಲ್ ಗಾಂಧಿ ಬ್ರಾಹ್ಮಣ ಎಂಬುದು ತಮಾಷೆ’|ನಾನು ಬ್ರಾಹ್ಮಣ ಎಂದ ರಾಹುಲ್‌ಗೆ ಸುಬ್ರಮಣಿಯನ್ ಸ್ವಾಮಿ ಕ್ಲಾಸ್| ರಾಹುಲ್ ಗಾಂಧಿ ಯೋಗಿಯೂ ಅಲ್ಲ, ತ್ಯಾಗಿಯೂ ಅಲ್ಲ ಎಂದ ಸ್ವಾಮಿ| ‘ಏಕಾಏಕಿ ಬ್ರಾಹ್ಮಣ ಆಗಲು ಸಾಧ್ಯವಿಲ್ಲ’| ‘ಉಪನಯನವಾದರೆ ಮಾತ್ರ ದ್ವಿಜ ಎನಿಸಿಕೊಳ್ಳಲು ಸಾಧ್ಯ’|

ನವದೆಹಲಿ(ಜ.05): ನಾನು ಬ್ರಾಹ್ಮಣ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ತ್ಯಾಗಿಯೂ ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್‌ ಗಾಂಧಿ ಬ್ರಾಹ್ಮಣ ಹೇಗಾಗುತ್ತಾರೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. 

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ವಾಮಿ, ಬ್ರಾಹ್ಮಣನಾದವನಿಗೆ ಉಪನಯನ ಆಗಿರಬೇಕಾಗುತ್ತದೆ. ಆಗ ಮಾತ್ರ ದ್ವಿಜ ಎನಿಸಿಕೊಳ್ಳುತ್ತಾನೆ. ಬ್ರಾಹ್ಮಣ ಏಕಾಏಕಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬ್ರಾಹ್ಮಣನಾದವನು ಜ್ಞಾನಿಯೂ , ತ್ಯಾಗಿಯೂ ಆಗಿರಬೇಕಾಗುತ್ತದೆ. ರಾಹುಲ್‌ ಜ್ಞಾನಿಯೂ ಅಲ್ಲ, ತ್ಯಾಗಿಯೂ ಅಲ್ಲ. ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ತಮಾಷೆಯಾಗಿ ನೋಡುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Karnataka News Live: ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’ - ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!