
ಬೆಂಗಳೂರು(ಜೂ.28): ಆತ ಸಾವಿರಾರು ಕನಸು ಕಂಡು ಬೆಂಗಳೂರಿಗೆ ಆಗಮಿಸಿದ್ದನು. ಆತನ ಕನಸಿನಂತೆ ಎಂಜಿಯರ್ ಕಾಲೇಜಿನಲ್ಲಿ ಕೊನೆಯ ಸೆಮಿಸ್ಟರ್'ನಲ್ಲಿ ಅಭ್ಯಾಸ ಮಾಡುತ್ತಿದ್ದನು. ತಾಯಿ ಅನಾರೋಗ್ಯ ಕಾರಣದಿಂದ ಹಲವು ದಿನಗಳು ಕಾಲೇಜಿಗೆ ಹೋಗಿರಲಿಲ್ಲ. ಆದ್ರೂ ಅಭ್ಯಾಸ ಮಾಡಿ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದನು. ಆದರೆ ಕಾಲೇಜಿನ ದುರಾಡಳಿತದಿಂದ ಆತ ಪ್ರಾಣವೇ ಬಿಟ್ಟಿದ್ದಾನೆ. ಏಕೆ ಅಂತೀರಾ ಈ ವರದಿ ನೋಡಿ.
ಬಳ್ಳಾರಿ ಮೂಲದ ಲೋಕೇಶ್ ವೈಟ್‌ಫೀಲ್ಡ್ ಸಮೀಪದ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕ್ಸ್ ವಿಭಾಗದ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ತಾಯಿ ಅನಾರೋಗ್ಯ ಅಂತ ಬಳ್ಳಾರಿಗೆ ಹೋಗಿದ್ದನು. ಹಲವು ದಿನಗಳ ಕಾಲ ಕಾಲೇಜಿಗೆ ಹೋಗಿರಲಿಲ್ಲ. ಕಾಲೇಜಿನ ದುರಾಡಳಿತ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ಮಾಡಿದ್ರು. ಆದ್ರೂ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿತ್ತು.
ನಿನ್ನೆ ಕಾಲೇಜಿಗೆ ಹೋಗಿದ್ದ ಲೋಕೇಶ್'ಗೆ ಕಾಲೇಜಿನ ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಮನನೊಂದ ಲೋಕೇಶ್ ತಾನು ಇರುವ ಎಆರ್ಕೆ ಅರ್ಪಾಟಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಲೋಕೇಶ್ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ತಿಳಿದ ಲೋಕೇಶ್ ಸ್ನೇಹಿತರು ಐಟಿಪಿಎಲ್ನಲ್ಲಿರುವ ನಾರಾಯಣ ಹೃದಯಾಲಕ್ಕೆ ಲೋಕೇಶ್ನನ್ನು ದಾಖಲು ಮಾಡಿದ್ರು. ಆದ್ರೆ ಅಷ್ಟರಲ್ಲಿ ಲೋಕೇಶ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ವಿಷಯ ತಿಳಿದು ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಲೋಕೇಶ್ ತಂದೆ- ತಾಯಿ ಆಕ್ರಂದನ ಮುಗಿಮುಟ್ಟಿದೆ.
ಒಟ್ಟಿನಲ್ಲಿ ಸಾವಿರಾರು ಕನಸು ಕಟ್ಟಿಕೊಂಡ ಬೆಂಗಳೂರಿಗೆ ಎಂಜಿಯರ್ ಅಭ್ಯಾಸ ಮಾಡಲು ಬಂದ ವಿದ್ಯಾರ್ಥಿಯೊಬ್ಬ ಕಾಲೇಜಿನ ಆಡಳಿತ ಮಂಡಳಿ ಅಂಧಾಕಾನೂನಿಗೆ ಬಲಿಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.