
ಬೆಂಗಳೂರು[ಜು.10] ಬೆಂಗಳೂರನ್ನು ಉಡ್ತಾ ಬೆಂಗಳೂರು ಆಗಲು ಬಿಡುವುದಿಲ್ಲ ಎಂದು ಡಿಸಿಎಂ ಪರಮೇಶ್ವರ ಹೇಳಿದ್ದಾರೆ. ರಾಜಧಾನಿಯ ಮಕ್ಕಳಿಗೆ ಮಾದಕ ದ್ರವ್ಯ ಅವ್ಯಾಹತವಾಗಿ ಸರಬರಾಜಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಪರಮೇಶ್ವರ, ಇಂಥ ವಿಚಾರಗಳು ನಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಜಯನಗರ ಶಾಲೆ ಬಳಿ ಒಂದು ಎರಡು ದಿನ ಸುಮ್ಮನೆ ಮಕ್ಕಳಿಗೆ ಚಾಕಲೇಟ್ ನೀಡ್ತಾರೆ ಹೀಗಾಗಿ ಮೂರ್ನಾಲ್ಕು ದಿನ ಆದ ಮೇಲೆ ಮಾದಕ ಮಿಶ್ರಿತ ಚಾಕಲೇಟ್ ನೀಡಿ ಮರುಳು ಮಾಡುತ್ತಾರೆ. ಇವರೆಲ್ಲರ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಹೇಳಿದರು.
ಪಂಜಾಬ್‌ನಲ್ಲಿ ಮಾದಕ ದ್ರವ್ಯ ವ್ಯವಹಾರ ಅವ್ಯಾಹತವಾಗಿ ನಡೆತಿತ್ತು. ಉಡ್ತಾ ಪಂಜಾಬ್ ಎಂದೇ ಹೆಸರಾಗಿತ್ತು. ಆದರೆ ಅಲ್ಲಿನ ಸರಕಾರ ಈಗ ಪರಿಸ್ಥಿತಿ ತಹಬದಿಗೆ ತಂದಿದೆ. ಮುಂಜಾಗೃತಾ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರುಗೌರಿ ಹತ್ಯೆ ಹಂತಕರನ್ನೇ ಹಿಡಿದಾಗಿದೆ. ಅದೇ ರೀತಿ ಮಾದಕ ಪದಾರ್ಥ ಮಾರಾಟ ಮಾಡೋರನ್ನ ಹಿಡಿಯಿರಿ. ಗಾಂಜಾ ಅರಣ್ಯದಲ್ಲಿ ಬೆಳೆಯುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಗೃಹ ಸಚಿವರು ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.